ಏಲಿಯನ್ ಹುಡುಕಾಟಕ್ಕೆ ಪೆಸಿಫಿಕ್ ಸಾಗರ ಧುಮುಕಲಿರುವ ನಾಸಾ..!

Nasa dives deep into Pacific Ocean in the search for life beyond Earth
Highlights

ಪರಗ್ರಹ ಜೀವಿಗಳ ಕುರಿತು ಮಾನವ ಸಂಶೋಧನೆ ನಡೆಸುತ್ತಿರುವುದ ಇಂದು ನಿನ್ನೆಯ ವಿಷಯವಲ್ಲ. ರಾತ್ರಿ ಆಗಸದತ್ತ ದೃಷ್ಟಿ ನೆಟ್ಟು ದಿಗಂತದ ಯಾವುದಾದರೊಂದು ಮೂಲೆಯಲ್ಲಿ ನಮ್ಮಂತಹ ಜೀವಿಗಳು ನೆಲೆಸಿರಬಹುದಾದ ಗ್ರಹದ ಹುಡುಕಾಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ.

ವಾಷಿಂಗ್ಟನ್(ಜೂ.2): ಪರಗ್ರಹ ಜೀವಿಗಳ ಕುರಿತು ಮಾನವ ಸಂಶೋಧನೆ ನಡೆಸುತ್ತಿರುವುದ ಇಂದು ನಿನ್ನೆಯ ವಿಷಯವಲ್ಲ. ರಾತ್ರಿ ಆಗಸದತ್ತ ದೃಷ್ಟಿ ನೆಟ್ಟು ದಿಗಂತದ ಯಾವುದಾದರೊಂದು ಮೂಲೆಯಲ್ಲಿ ನಮ್ಮಂತಹ ಜೀವಿಗಳು ನೆಲೆಸಿರಬಹುದಾದ ಗ್ರಹದ ಹುಡುಕಾಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ.

ಈ ವಿಷಯದಲ್ಲಿ ಹಲವು ಹೆಜ್ಜೆ ಮುಂದೆ ಹೋಗಿರುವ ನಾಸಾ, ಏಲಿಯನ್ ಜಗತ್ತಿನ ಹುಡುಕಾಟಕ್ಕೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹಗಲಿರುಳೂ ಶ್ರಮಿಸುತ್ತಲೇ ಇದೆ. ಆದರೆ ಪರಗ್ರಹ ಜೀವಿಗಳ ಅಸ್ತಿತ್ವದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನಾಸಾ ಇದೀಗ ಪೆಸಿಫಿಕ್ ಮಹಾಸಾಗಾರದ ಅಂತರಾಳಕ್ಕೆ ಧುಮುಕಲಿದೆ.

ಹೌದು, ಪೆಸಿಫಿಕ್ ಮಹಾಸಾಗರದ ೩ ಸಾವಿರ ಅಡಿ ಆಳದಲ್ಲಿ ಇರುವ ಜೀವಂತ ಜ್ವಾಲಾಮುಖಿಯ ಅಧ್ಯಯನ ನಡೆಸಲು ನಾಸಾ ಹೊಸದೊಂದು ಯಂತ್ರವನ್ನು ಕಳಿಸುತ್ತಿದೆ.  ಹವಾಯಿ ಬಿಗ್ ಐಲ್ಯಾಂಡ್ ಸಮುದ್ರದ ಆಳದಲ್ಲಿ ನಾಸಾ ಈ ಸಂಶೋಧನೆ ಕೈಗೊಳ್ಳಲಿದೆ. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಜ್ವಾಲಾಮುಖಿಗಳು ಕೂಡ ತಮ್ಮ ಕೊಡುಗೆ ನೀಡಿದ್ದು, ಸಾಗರಾಳದಲ್ಲಿ ಮೊದಲ ಜೀವಿಗಳ ಉಗಮದ ಸಂಭರ್ಭದಲ್ಲಿ ಜ್ವಾಲಾಮುಖಿಗಳ ಪಾತ್ರದ ಕುರಿತು ಸಂಶೋಧನೆ ನಡೆಸಲಿದೆ.

ಇನ್ನು ಪೆಸಿಫಿಕ್ ಸಾಗರಾಳದಲ್ಲಿ ಇರುವ ಈ ಜೀವಂತ ಜ್ವಾಲಾಮುಖಿಯ ಹಾಗೆ ಶನಿಗ್ರಹದ ಉಪಗ್ರಹ ಯುರೋಪಾದಲ್ಲೂ ಕೂಡ ಸಾಗರಾಳದಲ್ಲಿ ಜೀವಂತ ಜ್ವಾಲಾಮುಖಿ ಇದ್ದು, ಅಲ್ಲಿಯೂ ಜೀವಿಗಳ ಉಗಮಕ್ಕೆ ಸಹಾಯ ಮಾಡಿರಬಹುದಾದ ಸಾಧ್ಯತೆ ಕುರಿತು ನಾಸಾ ಅಧ್ಯಯನ ನಡೆಸಲಿದೆ.    

loader