Asianet Suvarna News Asianet Suvarna News

ಚಂದ್ರಯಾನ ಹೇಳಿದ್ದು ಕೇಳಿಸಿಕೊಂಡ ನಾಸಾ: ಅಲ್ಲಿದೆ ಅಪಾರ ನೀರು!

ಚಂದ್ರನಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ನೀರು! ಚಂದ್ರಯಾನ ಡಾಟಾ ಸಂಗ್ರಹಿಸಿದ ನಾಸಾ! ಮಂಜುಗಡ್ಡೆ ರೂಪದಲ್ಲಿ ಆಳದಲ್ಲಿ ನೀರು ಸಂಗ್ರಹ! ಚಂದ್ರನ ಧ್ರುವ ಪ್ರದೇಶದಲ್ಲಿ ಹೇರಳ ನೀರಿನ ಸಂಪತ್ತು

NASA Chief Excited About "Billions Of Tons" Of Water Ice On The Moon
Author
Bengaluru, First Published Aug 22, 2018, 5:26 PM IST

ವಾಷಿಂಗ್ಟನ್(ಆ.22): ಚಂದ್ರನ ಅನ್ವೇಷಣೆಗಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-1 ಮಿಷನ್ ನ ಡಾಟಾದಿಂದ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದು ಚಂದ್ರನ ಧ್ರುವ ಪ್ರದೇಶದಲ್ಲಿ ನೀರು ಹೆಪ್ಪುಗಟ್ಟಿದ ಸ್ಥಿತಿಯಲ್ಲಿದೆ ಎಂದಿದ್ದಾರೆ. 

ಚಂದ್ರನ ಮೇಲ್ಮೈ ನ ಕೆಲವೇ ಕೆಲವು ಮಿಲೀಮೀಟರ್ ನಷ್ಟು ಆಳದಲ್ಲಿ ನೀರು ಮಂಜುಗಡ್ಡೆ ರೂಪದಲ್ಲಿದೆ ಎಂದು ನಾಸಾ  ವಿಜ್ಞಾನಿಗಳು ಹೇಳಿದ್ದು, ಚಂದ್ರನಲ್ಲಿ ವಾಸಿಸುವ ಸಾಧ್ಯತೆಗಳನ್ನು ಅರಿಯುವುದಕ್ಕೆ ಇದು ಸಹಕಾರಿ ಎಂದಿದ್ದಾರೆ. 

ಜರ್ನಲ್ ಪಿಎನ್ಎಎಸ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಚಂದ್ರನ ಮೇಲ್ಮೆ ಮೇಲೆ  ಮಂಜುಗಡ್ಡೆ ನಿಕ್ಷೇಪಗಳು ಹರಡಿದ್ದು, ಅತ್ಯಂತ ಪುರಾತನವಾಗಿದ್ದಿರಬೇಕು ಎಂದು ಅಂದಾಜಿಸಲಾಗಿದೆ.

ದಕ್ಷಿಣ ಧ್ರುವವದಲ್ಲಿ ಮಂಜುಗಡ್ಡೆ  ಸಂಗ್ರಹವಾಗಿರುವ ರೀತಿಗೂ ಉತ್ತರ ಧ್ರುವದಲ್ಲಿ ಮಂಜುಗಡ್ಡೆ ಸಂಗ್ರಹವಾಗಿರುವ ರೀತಿಗೂ ವ್ಯತ್ಯಾಸವಿದ್ದು, ಇದನ್ನು ಕಂಡುಕೊಳ್ಳುವುದಕ್ಕೆ ನಾಸಾದ ಮೂನ್ ಮಿನರಾಲಜಿ ಮ್ಯಾಪರ್(ಎಂ3) ಹಾಗೂ ಚಂದ್ರಯಾನ-1 ರ ಡಾಟ ನೆರವಾಗಿದೆ. 

Follow Us:
Download App:
  • android
  • ios