ಬೆಂಗಳೂರು(ಅ.04): ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದಿಸಲು ವಕೀಲ ಪಾಲಿ ನಾರಿಮನ್​ ಸಮ್ಮತಿ ಸೂಚಿಸಿದ್ದಾರೆ.

ನಿನ್ನೆಯಷ್ಟೇ ನೀರು ಬಿಡದಿದ್ದರೆ ವಾದ ಮಾಡಲ್ಲ ಅಂತ ನಾರಿಮನ್​ ಹೇಳಿದ್ದರು. ಆದರೆ, ನಾರಿಮನ್​ ಮನವೊಲಿಸುವಲ್ಲಿ ರಾಜ್ಯದ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ನಾರಿಮನ್​'ಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು. ಕೇಂದ್ರ ಸಚಿವ ಅನಂತ್​​ಕುಮಾರ್, ಸಚಿವ ಎಂ.ಬಿ.ಪಾಟೀಲ್​​ ಮತ್ತೆ ವಾದ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ನಾಯಕರ ಮನವಿಗೆ ಒಪ್ಪಿರುವ ನಾರಿಮನ್​​ ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಲಿದ್ದಾರೆ.