ಬೆಂಗಳೂರು(ಅ.4): ನಾರಿಮನ್ ವೈಫಲ್ಯದ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.'ರಾಜ್ಯದ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ಕರ್ನಾಟಕ ಪರ ವಕೀಲರ ತಂಡ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದ್ದು ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜಿನಾಮೆ ನೀಡಬೇಕು. ವಕೀಲರಿಗೆ ನೀಡಲು ಉಪಯೋಗಿಸಿರುವುದು ಸಾರ್ವಜನಿಕರ ಹಣವಾಗಿದ್ದು, ಎಲ್ಲ ಮೊತ್ತವನ್ನೂ ಸರ್ಕಾರಕ್ಕೆ ಹಿಂದಿರುಗಿಸಬೇಕು ಅಥವಾ ಬೆಳೆ ನಷ್ಟಹೊಂದಿದ ರೈತರಿಗೆ ದಾನ ಮಾಡಬೇಕು'. 'ಕಾವೇರಿ ಕೊಳ್ಳದ ರೈತರಿಗೆ ಆರ್ಥಿಕ ಪರಿಹಾರವನ್ನೂ ಸರ್ಕಾರ ಘೋಷಣೆ ಮಾಡಬೇಕು. ಕರ್ನಾಟಕ ಸರ್ಕಾರ ಮತ್ತು ಕಾನೂನು ತಂಡ ಕಾನೂನಾತ್ಮಕವಾಗಿ ನಿರ್ಲಕ್ಷ್ಯ ಮಾಡಿದ್ದು ಸ್ಥಿತಿಗೆ ಕಾರಣವಾಗಿದೆ. ಬೆಂಗಳೂರಿನ ಉಕ್ಕಿನ ಮೇಲ್ಸೆತುವೆ ಯೋಜನೆ ಅನುಷ್ಠಾನ ಹಾಗೂ ಭ್ರಷ್ಟಅಧಿಕಾರಿಗಳನ್ನು ಬಿಟ್ಟು ಅಮಾಯಕ ಬೆಂಗಳೂರಿಗರ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರ ತೋರಿಸಿದ ತರಾತುರಿ ಮತ್ತು ಕಾಳಜಿಯನ್ನು ಇಲ್ಲೂ ತೋರಿಸಬೇಕಿದೆ’’ ಎಂದು ತಿಳಿಸಿದ್ದಾರೆ.