ನಮ್ಮ ದೇಶದ ಎಲ್ಲರಿಗೂ ಸಹ ಸಮಾನ ಕಾನೂನು ಜಾರಿಯಾಗಬೇಕು. ಜೊತೆಗೆ ಇಂದಿನ ಪರಿಸ್ಥಿತಿಯಲ್ಲಿ ರಾಷ್ಟದ ರಕ್ಷಣೆ, ಸುರಕ್ಷತೆಗೆ ಗಮನಹರಿಸುವುದು ಅಗತ್ಯವಾಗಿದೆ. ದೇಶದಲ್ಲಿ ನಾವೆಲ್ಲರೂ ಸಹ ಸಂಘಟಿತರಾಗುವುದು ನಮಗೆ ಈಗ ಬಹಳ ಮುಖ್ಯವಾಗಿದೆ.
ಉಡುಪಿ(ನ.26): ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್'ನಲ್ಲಿ ಕಾಶಿ ಮಠಾಧೀಶ ನರೇಂದ್ರನಾಥ್ ಸರಸ್ವತಿ ಶ್ರೀ ಹೇಳಿಕೆ ವಿವಾದಾತ್ಮಕ ತಿರುವು ಪಡೆದುಕೊಂಡಿದೆ
ಸಂಸದ್'ನಲ್ಲಿ ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 4 ಜನರನ್ನು ಮದುವೆಯಾಗಿ 20 ಮಕ್ಕಳನ್ನು ಪಡೆಯುತ್ತಿರುವ ಅಲ್ಪಸಂಖ್ಯಾತರು 2 ಮಕ್ಕಳಿರುವ ಬಹುಸಂಖ್ಯಾತ ಸಮಾಜದಿಂದ ಪಾವತಿಸುವ ತೆರಿಗೆಯ ಹಣವನ್ನು ಸರ್ಕಾರದ ಸೌಲಭ್ಯಗಳ ಮೂಲಕ ಪಡೆಯುತ್ತಿದ್ದಾರೆ.
ಆದ್ದರಿಂದ ನಮ್ಮ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯು ಅನಿವಾರ್ಯವಾಗಿದೆ. ನಮ್ಮ ದೇಶದ ಎಲ್ಲರಿಗೂ ಸಹ ಸಮಾನ ಕಾನೂನು ಜಾರಿಯಾಗಬೇಕು. ಜೊತೆಗೆ ಇಂದಿನ ಪರಿಸ್ಥಿತಿಯಲ್ಲಿ ರಾಷ್ಟದ ರಕ್ಷಣೆ, ಸುರಕ್ಷತೆಗೆ ಗಮನಹರಿಸುವುದು ಅಗತ್ಯವಾಗಿದೆ. ದೇಶದಲ್ಲಿ ನಾವೆಲ್ಲರೂ ಸಹ ಸಂಘಟಿತರಾಗುವುದು ನಮಗೆ ಈಗ ಬಹಳ ಮುಖ್ಯವಾಗಿದೆ.
ಲಕ್ಷ ರೂ. ಮೊಬೈಲ್ ಖರೀದಿಸುವ ನಾವು ಖಡ್ಗ ಇಟ್ಟುಕೊಳ್ಳುತ್ತಿಲ್ಲ
1 ಲಕ್ಷ ಅಥವಾ 50 ಸಾವಿರ ರೂ ಖರ್ಚು ಮಾಡಿ ಮೊಬೈಲ್ ಇಟ್ಟುಕೊಳ್ಳುತ್ತಿದ್ದೇವೆ. ಆದರೆ ಮನೆಗಳಲ್ಲಿ ನಮ್ಮ ರಕ್ಷಣೆಗಾಗಿ 10 ಸಾವಿರ ರೂ ಬೆಲೆ ಖಡ್ಗ ಇಟ್ಟುಕೊಂಡಿಲ್ಲ. ನಮ್ಮ ಮನೆಯಲ್ಲಿ ನಮ್ಮ ರಕ್ಷಣೆಗೆ ಒಂದು ಲಾಠಿ ಒಂದು ಕೋಲು ಇಟ್ಟುಕೊಂಡಿಲ್ಲ. ನಮ್ಮ ಮನೆಗಳಲ್ಲಿ ರಕ್ಷಣೆಗೆ ಖಡ್ಗ, ಲಾಠಿ, ಕೋಲು ಇಟ್ಟುಕೊಳ್ಳುವುದು ಅತ್ಯಗತ್ಯ' ಎಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ನಿನ್ನೆ ಹರಿದ್ವಾರದ ಗೋವಿಂದದೇವ್ ಗಿರಿಜಿ ಮಹಾರಾಜ್ ಸ್ವಾಮೀಜಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಅಲ್ಪಸಂಖ್ಯಾತರ ಜನಸಂಖ್ಯೆ ಏರುತ್ತಿದೆ. ಈ ಕಾರಣದಿಂದ ಹಿಂದು ಸಮುದಾಯ ನಾಲ್ಕು ಮಕ್ಕಳನ್ನು ಮಾಡಿಕೊಳ್ಳಿ ಎಂದು ಆಗ್ರಹಿಸುವ ಕಾಲ ಈಗ ಬಂದಿದೆ' ಎಂದು ವಿವಾದಿತ ಮಾತುಗಳನ್ನು ಆಡಿದ್ದರು.
