ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಾಲ್‌'ಕೃಷ್ಣ ಅಡ್ವಾಣಿ ಎಲ್ಲಿ ಬಂದು ತನ್ನ ವಿರುದ್ಧ ಮಾಧ್ಯಮಗಳಿಗೆ ಮಾತನಾಡುತ್ತಾರೋ ಎಂಬ ಆತಂಕ ಇದ್ದೇ ಇದೆ.

ನವದೆಹಲಿ (ಜ.09):  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಾಲ್‌'ಕೃಷ್ಣ ಅಡ್ವಾಣಿ ಎಲ್ಲಿ ಬಂದು ತನ್ನ ವಿರುದ್ಧ ಮಾಧ್ಯಮಗಳಿಗೆ ಮಾತನಾಡುತ್ತಾರೋ ಎಂಬ ಆತಂಕ ಇದ್ದೇ ಇದೆ.

ಹೀಗಾಗಿಯೇ ಆಗಾಗ ತಾನೇ ಹೋಗಿ ಅಡ್ವಾಣಿ ಅವರನ್ನು ಮಾತನಾಡಿಸುತ್ತಾರೆ. ಆಗಾಗ ಬೆಂಬಲಿಗರನ್ನು ಕಳುಹಿಸಿ ಸುಖ ದುಃಖ ವಿಚಾರಿಸುತ್ತಾರೆ. ಇದೆಲ್ಲ ಗೊತ್ತಿದ್ದೋ ಏನೋ ಪಾರ್ಲಿಮೆಂಟ್‌'ನಲ್ಲಿ ಅಡ್ವಾಣಿ ಅವರು ಮೀಡಿಯಾ ಇರುವಲ್ಲಿ ಬಂದರೆ ಸಾಕು ಬಿಜೆಪಿ ನಾಯಕರ ಹೃದಯದ ಬಡಿತ ಜಾಸ್ತಿಯಾಗುತ್ತದೆ. ಹೊಸ ವರ್ಷದ ಸಮಯದಲ್ಲಿ ಅಡ್ವಾಣಿ ತನ್ನ ಪುತ್ರಿಯೊಂದಿಗೆ ‘ಟೈಗರ್ ಜಿಂದಾ ಹೈ’ ನೋಡಿ ಬಂದಿದ್ದನ್ನು ಕೂಡ ಪತ್ರಕರ್ತರಿಗೆ ಹೇಳಿಕೊಂಡಿದ್ದಾರೆ. ಚಿತ್ರದ ಟೈಟಲ್ ಜೊತೆಗೆ ಅಡ್ವಾಣಿ ಏನೋ ಹೇಳಲು ಬಯಸುತ್ತಿದ್ದಾರೆ ಎನಿಸುತ್ತದೆ.

ಪ್ರಶಾಂತ್ ನಾತು, (ಇಂಡಿಯಾ ಗೇಟ್ )