ಮೋದಿ ಹೇಳಿದ 3 ಅಪಾಯ : ಮನುಕುಲಕ್ಕೆ ಎದುರಾದ ಗಂಡಾಂತರಗಳು

First Published 24, Jan 2018, 8:56 AM IST
Narendra Modi warns of three global threats
Highlights

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮನುಕುಲಕ್ಕೆ ಎದುರಾಗಿರುವ ಮೂರು ಪ್ರಮುಖ ಅಪಾಯಗಳನ್ನು ಜಾಗತಿಕ ಸಮುದಾಯದ ಮುಂದೆ ಅರ್ಥಗರ್ಭಿತವಾಗಿ ತೆರೆದಿಟ್ಟಿದ್ದಾರೆ. ಮೋದಿ ಅವರ ಪ್ರಕಾರ, ಆ ಮೂರು ಅಪಾಯಗಳು ಯಾವುದು ಗೊತ್ತಾ..?

ನವದೆಹಲಿ: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮನುಕುಲಕ್ಕೆ ಎದುರಾಗಿರುವ ಮೂರು ಪ್ರಮುಖ ಅಪಾಯಗಳನ್ನು ಜಾಗತಿಕ ಸಮುದಾಯದ ಮುಂದೆ ಅರ್ಥಗರ್ಭಿತವಾಗಿ ತೆರೆದಿಟ್ಟಿದ್ದಾರೆ. ಮೋದಿ ಅವರ ಪ್ರಕಾರ, ಆ ಮೂರು ಅಪಾಯಗಳು ಯಾವುದು ಗೊತ್ತಾ..?

*ಹವಾಮಾನ ಬದಲಾವಣೆ. * ಭಯೋತ್ಪಾದನೆ * ಸ್ವದೇಶಿ ಕೈಗಾರಿಕೆಗಳನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸಿಕೊಳ್ಳಲು ಸುಂಕ ಹೇರುವಂತಹ ಸ್ವದೇಶಿ ವಾದ.

*ಹವಾಮಾನ ಬದಲಾವಣೆ.

ಉತ್ತರ ಧ್ರುವದಲ್ಲಿ ನೀರ್ಗಲ್ಲುಗಳು ಕುಗ್ಗುತ್ತಿವೆ. ಮಂಜುಗಡ್ಡೆ ಕರಗುತ್ತಿವೆ. ದ್ವೀಪಗಳು ಮುಳುಗುತ್ತಿವೆ. ಕೆಲವೊಂದು ಸಂದರ್ಭದಲ್ಲಿ ತುಂಬಾ ತಾಪಮಾನವಿರುತ್ತದೆ. ಇನ್ನು ಕೆಲವು ಸಂದರ್ಭದಲ್ಲಿ ಭೀಕರ ಚಳಿ ಇರುತ್ತದೆ. ಪ್ರವಾಹವೂ ಕಂಡು ಬರುತ್ತಿದೆ. ಈ ಪರಿಸ್ಥಿತಿ ಸುಧಾರಿಸಲು ನಾವೇನು ಮಾಡಬೇಕು? ಸಂಕುಚಿತ ಮನಸ್ಥಿತಿಯಿಂದ ನಾವು ಹೊರಬರಬೇಕು. ಪ್ರತಿಯೊಬ್ಬರೂ ಇಂಗಾಲದ ಹೊರಸೂಸುವಿಕೆ ಬಗ್ಗೆ ಮಾತನಾಡುತ್ತಾರೆ. ಆದರೆ ಕೆಲವೇ ಕೆಲವು ದೇಶಗಳು ಮಾತ್ರ ಸಂಪನ್ಮೂಲಗಳ ಮೂಲಕ ತಮ್ಮ ಮಾತನ್ನು ಉಳಿಸಿಕೊಳ್ಳುತ್ತವೆ. ನಾವೀಗ ದುರಾಸೆ ಆಧರಿತ ಬಳಕೆ ಮೇಲೆ ಗಮನಹರಿಸುತ್ತಿದ್ದೇವೆ. ನಮ್ಮ ಸಂತೋಷವಷ್ಟೇ ನಮ್ಮ ಆದ್ಯತೆಯಾಗಿದೆ.

*ಆರ್ಥಿಕ ರಕ್ಷಣಾ ನೀತಿ

ಹಲವಾರು ದೇಶಗಳು ತಮ್ಮಗಳ ಮೇಲೆಯೇ ಹೆಚ್ಚೆಚ್ಚು ಗಮನ ಕೇಂದ್ರೀಕರಿಸು ತ್ತಿವೆ.ಜಾಗತೀಕರಣಕ್ಕೆ ವಿರುದ್ಧವಾದ ಬೆಳವಣಿಗೆನಡೆಯುತ್ತಿರುವ ಭಾವನೆ ಕಾಡುತ್ತದೆ. ಭಯೋತ್ಪಾದನೆ, ಹವಾಮಾನ ಬದಲಾವಣೆಗಿಂತ ಇದು ಕಡಿಮೆ ಅಪಾಯ ಕಾರಿ ಎಂದು ಪರಿಗಣಿಸಲಾಗದು. ತನ್ನ ಮೂಲ ಸಾರವನ್ನು ಜಾಗತೀಕರಣ ಕಳೆದು ಕೊಳ್ಳುತ್ತಿದೆ. ಪ್ರತಿಯೊಬ್ಬರೂ ಅಂತರ ಸಂಪರ್ಕ ಹೊಂದಿದ ಜಗತ್ತಿನ ಬಗ್ಗೆ ಮಾತನಾಡುತ್ತಾರೆ. ಆದರೆ ಜಾಗತೀಕರಣ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ದ್ವಿಪಕ್ಷೀಯ ಮಾತುಕತೆ ಸ್ತಬ್ಧವಾಗಿವೆ. ಜಾಗತೀಕರಣ ತಡೆಗೆ ಹೊಸ ಶುಲ್ಕದ ತಡೆಗೋಡೆ ಅಳವಡಿಕೆ ಮಾಡಲಾಗುತ್ತಿದೆ. ಸ್ವದೇಶಿ ವಾದವನ್ನು ದೇಶಗಳು ಪಾಲಿಸುತ್ತಿವೆ.

* ಭಯೋತ್ಪಾದನೆ

ಭಾರತದ ಕಳವಳ ಏನೆಂದು ನಿಮಗೆಲ್ಲಾ ಗೊತ್ತಿದೆ. ಈ ಸವಾಲಿನ ಬಗ್ಗೆ ಎಲ್ಲ ಸರ್ಕಾರಗಳಿಗೂ ತಿಳಿದಿದೆ. ಇದಕ್ಕೆ ಸಂಬಂಧಿಸಿದಂತೆ ೨ಆಯಾಮಗಳ ಮೇಲೆ ನಾನು ಗಮನ ಕೇಂದ್ರೀಕರಿಸಲು ಬಯಸುತ್ತೇನೆ. ಭಯೋತ್ಪಾದನೆ ಅಪಾಯಕಾರಿ. ಅಷ್ಟೇ ಅಪಾಯಕಾರಿ ಯಾವುದೆಂದರೆ ಒಳ್ಳೆಯ ಹಾಗೂ ಕೆಟ್ಟ ಭಯೋತ್ಪಾದಕರ ನಡುವೆ ಸೃಷ್ಟಿಸಿರುವ ಕೃತಕ ವ್ಯತ್ಯಾಸ. ಸುಶಿಕ್ಷಿತರು, ಸ್ಥಿತಿವಂತರನ್ನು ಭಯೋತ್ಪಾದಕರನ್ನಾಗಿಸಲಾಗುತ್ತಿದೆ.

loader