ಜಮ್ಮು ಕಾಶ್ಮೀರ (ಸೆ.24): ಇಲ್ಲಿನ ಉರಿ ಪ್ರದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದು 18 ಮಂದಿ ಸೈನಿಕರು ಮೃತಪಟ್ಟ 7 ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.

ದಾಳಿ ನಡೆದ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಎಲ್ಲರ ಕಣ್ಣು ಮೋದಿಯವರ ಮೇಲಿದೆ. ನೆರೆಯ ಪಾಕಿಸ್ತಾನವನ್ನುದ್ದೇಶಿಸಿ ಹೇಗೆ ಮಾತನಾಡುತ್ತಾರೆ, ದಾಳಿಯ ಹಿಂದೆ ಜೈಶ್-ಇ-ಮಹಮ್ಮದ್ ಸಂಘಟನೆ ಇದೆ ಎಂದು ನಂಬಲಾಗಿದ್ದು ಅವರನ್ನುದ್ದೇಶಿಸಿ ಏನು ಹೇಳಬಹುದು ಎನ್ನುವುದು ಕುತೂಹಲದ ವಿಷಯವಾಗಿದೆ.

ಇಂದು ಸಂಜೆ 5 ಗಂಟೆಗೆ ಕೇರಳದ ರಾಷ್ಟ್ರೀಯ ಸಮಿತಿಯ ಸಭೆಯಲ್ಲಿ ಭಾಗವಹಿಸಲಿದ್ದು ಅಲ್ಲಿ ಉರಿ ದಾಳಿಯ ಬಗ್ಗೆ ದನಿ ಎತ್ತಲಿದ್ದಾರೆ.

ಇಂದು ಬೆಳಿಗ್ಗೆ ಸೇನಾ ಮುಖ್ಯಸ್ಥರನ್ನು ಮೋದಿ ತಮ್ಮ ಅಧಿಕೃತ ನಿವಾಸ ನವದೆಹಲಿಯಲ್ಲಿಂದು ಭೇಟಿ ಮಾಡಿ ಮಾತುಕತೆ ನಡೆಸಿದರು.