ಭಾರತದ ಸ್ವಾತಂತ್ರ್ಯ ಹೋರಾಟದ ಗೆಲುವಿನ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, "ನಮ್ಮ ಸ್ವಾತಂತ್ರ್ಯವು ನಮ್ಮ ದೇಶಕ್ಕೊಂದೇ ಸಂಬಂಧಿಸಿದ್ದಲ್ಲ. ಜಗತ್ತಿನ ಇತರ ಭಾಗಗಳಲ್ಲಿನ ವಸಾಹತುಶಾಹಿ ಸಾಮ್ರಾಜ್ಯಗಳ ಅಂತ್ಯದ ಅರಂಭಕ್ಕೆ ನಮ್ಮದೇ ಮುನ್ನುಡಿಯಾಯಿತು," ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಆ. 09): ಕ್ವಿಟ್ ಇಂಡಿಯಾ ಚಳವಳಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಭಾಷ್ಯ ಬರೆದಿದ್ದಾರೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯ ಸಂದರ್ಭವಾದ ಇಂದು ನರೇಂದ್ರ ಮೋದಿ ಆ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಕೋಮುವಾದ, ಜಾತಿವಾದ ಮತ್ತು ಭ್ರಷ್ಟಾಚಾರಗಳಂತಹ ಸಮಸ್ಯೆಗಳನ್ನು ಭಾರತದಿಂದ ಮುಕ್ತಗೊಂಡಿಸಿ 2022ರಷ್ಟರಲ್ಲಿ ನವಭಾರತ ನಿರ್ಮಾಣ ಮಾಡಬೇಕೆಂದು ಕರೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ 1942-47ರವರೆಗಿನ ಕ್ವಿಟ್ ಇಂಡಿಯಾ ಚಳವಳಿಯ 5 ವರ್ಷದಲ್ಲಿ ಭಾರತವು ಬ್ರಿಟಿಷ್ ವಸಾಹತುಶಾಹಿಯ ಬೆನ್ನೆಲುಬು ಮುರಿದು ಭಾರತಕ್ಕೆ ಹೊಸ ಜಾಗೃತಿ ಮೂಡಿಸಿತು. ಹೊಸ ಹುಮ್ಮಸ್ಸು ಹುಟ್ಟಿಕೊಂಡಿತು" ಎಂದು ಮೋದಿ ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟದ ಗೆಲುವಿನ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, "ನಮ್ಮ ಸ್ವಾತಂತ್ರ್ಯವು ನಮ್ಮ ದೇಶಕ್ಕೊಂದೇ ಸಂಬಂಧಿಸಿದ್ದಲ್ಲ. ಜಗತ್ತಿನ ಇತರ ಭಾಗಗಳಲ್ಲಿನ ವಸಾಹತುಶಾಹಿ ಸಾಮ್ರಾಜ್ಯಗಳ ಅಂತ್ಯದ ಅರಂಭಕ್ಕೆ ನಮ್ಮದೇ ಮುನ್ನುಡಿಯಾಯಿತು," ಎಂದು ಅಭಿಪ್ರಾಯಪಟ್ಟಿದ್ದಾರೆ.

1942-47ರವರೆಗೆ ಇದ್ದ ಹೋರಾಟದ ಹುಮ್ಮಸ್ಸನ್ನು 2017ರಿಂದ 2022ರ ಅವಧಿಯಲ್ಲೂ ಅವಳಡಿಸಿಕೊಳ್ಳಬೇಕು, ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ.