ಮುಂಬೈ[ಮೇ.12]: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರ ದೇಶಿ ಮತ್ತು ವಿದೇಶಿ ಪ್ರವಾಸಕ್ಕೆ 393 ಕೋಟಿ ರು. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಮುಂಬೈನ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್‌ ಗಲಗಲಿ ಸಲ್ಲಿಸಿದ್ದ ಅರ್ಜಿಗೆ ಸರ್ಕಾರ ಈ ಮಾಹಿತಿ ನೀಡಿದೆ. ಮಾಹಿತಿ ಅನ್ವಯ, ಪ್ರಧಾನಿ ಹಾಗೂ ಸಚಿವರ ವಿದೇಶ ಪ್ರಯಾಣಕ್ಕೆ 263 ಕೋಟಿ ರು., ದೇಶೀಯ ಪ್ರಯಾಣಕ್ಕೆ 48 ಕೋಟಿ ರು. ವೆಚ್ಚವಾಗಿದೆ. ಇನ್ನು ರಾಜ್ಯ ಖಾತೆ ಸಚಿವರ ವಿದೇಶ ಪ್ರಯಾಣಕ್ಕೆ 29 ಕೋಟಿ, ದೇಶೀ ಪ್ರಯಾಣಕ್ಕೆ 53 ಕೋಟಿ ರು. ವೆಚ್ಚವಾಗಿದೆ. ಇನ್ನು ಪ್ರಧಾನಿ ಮೋದಿ 2014, ಮೇನಿಂದ2019, ಫೆ.22ರ ಅವಧಿಯಲ್ಲಿ 49 ಬಾರಿ ವಿದೇಶ ಪ್ರಯಾಣ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

2018ರಲ್ಲಿ ಸರ್ಕಾರ, ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಕ್ಕೆ 2021 ಕೋಟಿ ರು.ವೆಚ್ಚವಾಗಿದೆ ಎಂದು ಹೇಳಿತ್ತು. ಇದರಲ್ಲಿ ವಿಮಾನ ಪ್ರಯಾಣ, ನಿರ್ವಹಣೆ, ಹಾಟ್‌ಲೈನ್‌ ಸ್ಥಾಪನೆ ಮೊದಲಾದ ವೆಚ್ಚಗಳೂ ಸೇರಿವೆ ಎಂದಿತ್ತು.ುವ ಮಾಹಿತಿ ಇದಾಗಿದೆ. ವಿದೇಶ ಭೇಟಿಗೆ ಸಂಬಂಧಿಸಿ 2018, ಡಿಸೆಂಬರ್‌ನಲ್ಲಿ ಸರ್ಕಾರ ರಾಜ್ಯಸಭೆಗೆ ತಿಳಿಸಿದ ಮಾಹಿತಿಯಲ್ಲಿ 2,021ಕೋಟಿಗೂ ಹೆಚ್ಚು ವೆಚ್ಚವಾಗಿದೆ ಎಂದಿತ್ತು. ಇದರಲ್ಲಿ ಬಾಡಿಗೆ ವಿಮಾನಗಳಲ್ಲಿನ ಪ್ರಯಾಣ, ವಿಮಾನಗಳ ನಿರ್ವಹಣೆ, ಹಾಟ್‌ಲೈನ್‌ ಸೌಲಭ್ಯವೂ ಸೇರಿವೆ ಎಂದು ತಿಳಿಸಲಾಗಿತ್ತು.