ನವದೆಹಲಿ[ಮೇ.31]: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಮೇ.30ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ 57 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಯಾರಿಗೆ ಯಾವ ಖಾತೆ ಎಂಬ ಕುತೂಹಲ ಮೂಡಿತ್ತು. ಆದರೀಗ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ. 

"

ನರೇಂದ್ರ ಮೋದಿ: ಪ್ರಧಾನ ಮಂತ್ರಿ

ಕ್ಯಾಬಿನೆಟ್ ದರ್ಜೆ ಸಚಿವರು

* ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ

* ಅಮಿತ್ ಶಾ: ಗೃಹ ಇಲಾಖೆ

* ನಿತಿನ್ ಗಡ್ಕರಿ: ಭೂಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ/ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳ ಖಾತೆ

* ಡಿ.ವಿ.ಸದಾನಂದಗೌಡ- ರಸಗೊಬ್ಬರ ಮತ್ತು ರಾಸಾಯನಿಕ (ದಿ.ಅನಂತಕುಮಾರ್ ನಿಭಾಯಿಸುತ್ತಿದ್ದ ಖಾತೆ)

* ನಿರ್ಮಲಾ ಸೀತಾರಾಮನ್: ವಿತ್ತ, ಕಾರ್ಪೊರೇಟ್ ವ್ಯವಹಾರ

* ರಾಮವಿಲಾಸ್ ಪಾಸ್ವಾನ್ - ಆಹಾರ ಮತ್ತು ನಾಗರಿಕ ಪೂರೈಕೆ

* ನರೇಂದ್ರ ಸಿಂಗ್ ಥೋಮರ್ - ಕೃಷಿ ಹಾಗೂ ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್

* ರವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ/ ಸಂಪರ್ಕ ಖಾತೆ ಮತ್ತು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ. 

* ಹರ್‌ಸಿಮ್ರತ್‌ ಕೌರ್ ಬಾದಲ್‌: ಆಹಾರ ಸಂಸ್ಕರಣೆ

* ಥಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ, ಸಬಲೀಕರಣ

* ಡಾ. ಸುಬ್ರಹ್ಮಣ್ಯನ್ ಜೈಶಂಕರ್- ವಿದೇಶಾಂಗ ಖಾತೆ

* ರಮೇಶ್ ಪೋಖ್ರಿಯಾಲ್- ಮಾನವ ಸಂಪನ್ಮೂಲ ಇಲಾಖೆ

* ಅರ್ಜುನ್ ಮುಂಡಾ- ಬುಡಕಟ್ಟು ವ್ಯವಹಾರ

* ಸ್ಮೃತಿ ಝುಬಿನ್ ಇರಾನಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವುಳಿ 

* ಡಾ. ಹರ್ಷವರ್ಧನ್‌- ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ

* ಪ್ರಕಾಶ್ ಜಾವಡೇಕರ್‌- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ/ ವಾರ್ತಾ ಮತ್ತು ಪ್ರಸಾರ ಖಾತೆ

* ಪಿಯೂಷ್ ಗೋಯಲ್- ರೈಲ್ವೇ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ

* ಧರ್ಮೇಂದ್ರ ಪ್ರಧಾನ್- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆ

* ಮುಖ್ತಾರ್ ಅಬ್ಬಾಸ್ ನಖ್ವಿ- ಅಲ್ಪಸಂಖ್ಯಾತ ವ್ಯವಹಾರ

* ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳು/ ಕಲ್ಲಿದ್ದಲು ಮತ್ತು ಗಣಿ ಖಾತೆ 

* ಡಾ. ಮಹೇಂದ್ರನಾಥ್ ಪಾಂಡೆ- ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ

* ಅರವಿಂದ ಗಣಪತ್ ಸಾವಂತ್‌- ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ

* ಗಿರಿರಾಜ್ ಸಿಂಗ್‌- ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ

* ಗಜೇಂದ್ರ ಸಿಂಗ್‌ ಶೇಖಾವತ್‌- ಜಲಶಕ್ತಿ ಖಾತೆ. 

ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) 

* ಸಂತೋಷ್ ಕುಮಾರ್ ಗಂಗ್ವಾರ್‌- ಕಾರ್ಮಿಕ ಮತ್ತು ಉದ್ಯೋಗ ಖಾತೆ

* ರಾವ್ ಇಂದ್ರಜಿತ್ ಸಿಂಗ್‌- ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ/ಯೋಜನಾ ಖಾತೆ

* ಶ್ರೀಪಾದ ಯಸ್ಸೋ ನಾಯಕ್‌- ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಷ್) ಹಾಗೂ ರಕ್ಷಣಾ ಖಾತೆ

* ಡಾ. ಜಿತೇಂದ್ರ ಸಿಂಗ್‌- ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ / ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ/ ಅಣುಶಕ್ತಿ ಇಲಾಖೆ ಸಹಾಯಕ ಸಚಿವರು ಮತ್ತು ಬಾಹ್ಯಾಕಾಶ ಇಲಾಖೆ

* ಕಿರಣ್‌ ರೆಜಿಜು- ಯುವಜನ ವ್ಯವಹಾರ ಮತ್ತು ಕ್ರೀಡೆ/ ಅಲ್ಪಸಂಖ್ಯಾತ ವ್ಯವಹಾರ 

* ಪ್ರಹ್ಲಾದ್ ಸಿಂಗ್ ಪಟೇಲ್- ಸಂಸ್ಕೃತಿ ಖಾತೆ ಸಹಾಯಕ ಸಚಿವರು/ಪ್ರವಾಸೋದ್ಯಮ ಖಾತೆ

* ರಾಜ್‌ಕುಮಾರ್ ಸಿಂಗ್- ವಿದ್ಯುತ್‌ ಖಾತೆ ಸಹಾಯಕ ಸಚಿವರು/ ನವೀನ ಮತ್ತು ಪುನರ್‌ ನವೀಕರಿಸಬಹುದಾದ ಇಂಧನ ಖಾತೆ/, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ. 

* ಹರ್‌ದೀಪ್ ಸಿಂಗ್‌ ಪುರಿ- ಗೃಹ ಮತ್ತು ನಗರ ವ್ಯವಹಾರಗಳ ಖಾತೆ/ ನಾಗರಿಕ ವಿಮಾನ ಯಾನ/ ವಾಣಿಜ್ಯ ಮತ್ತು ಉದ್ಯಮ ಖಾತೆ

* ಮನ್‌ಸುಖ್‌ ಎಲ್‌ ಮಾಂಡವೀಯ- ಹಡಗು ಖಾತೆ/ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ

ರಾಜ್ಯ ದರ್ಜೆ ಸಚಿವರು: 

* ಫಗನ್‌ ಸಿಂಗ್ ಕುಲಸ್ತೆ- ಉಕ್ಕು ಖಾತೆ 

* ಅಶ್ವಿನಿ ಕುಮಾರ್ ಚೌಬೆ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

* ಅರ್ಜುನ್ ರಾಮ್ ಮೇಘ್ವಾಲ್- ಸಂಸದೀಯ ವ್ಯವಹಾರಗಳ ಖಾತೆ/ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ 

* ಜನರಲ್ (ನಿವೃತ್ತ) ವಿ.ಕೆ ಸಿಂಗ್- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ

* ಕೃಷ್ಣ ಪಾಲ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ

* ಧನ್ವೇ ರಾವ್ ಸಾಹೇಬ್‌- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣೆ 

* ಜಿ. ಕಿಶನ್ ರೆಡ್ಡಿ- ಗೃಹ ಖಾತೆ ಸಹಾಯಕ ಸಚಿವ. 

* ಪರ್ಷೋತ್ತಮ್ ರೂಪಾಲ- ಕೃಷಿ ಮತ್ತು ರೈತರ ಕಲ್ಯಾಣ ಖಾತೆ

* ರಾಮದಾಸ್ ಅಠವಳೆ- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

* ಸಾಧ್ವಿ ನಿರಂಜನ್ ಜ್ಯೋತಿ- ಗ್ರಾಮೀಣಾಭಿವೃದ್ಧಿ 

* ಬಾಬುಲ್ ಸುಪ್ರಿಯೋ- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

* ಸಂಜೀವ್ ಕುಮಾರ್ ಬಲ್ಯಾನ್- ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ

* ಧೋತ್ರೆ ಸಂಜಯ್‌ ಶಾಮ್‌ರಾವ್- ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಪರ್ಕ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ 

* ಅನುರಾಗ್ ಸಿಂಗ್‌ ಠಾಕೂರ್- ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಖಾತೆ

* ಅಂಗಡಿ ಸುರೇಶ್ ಚನ್ನಬಸಪ್ಪ- ರೈಲ್ವೇ ಖಾತೆ 

* ನಿತ್ಯಾನಂದ ರಾಯ್- ಗೃಹ ಖಾತೆ 

* ರತನ್‌ಲಾಲ್‌ ಖಟಾರಿಯಾ- ಜಲಶಕ್ತಿ ಖಾತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ 

* ವಿ. ಮುರಳೀಧರನ್‌- ವಿದೇಶಾಂಗ ವ್ಯವಹಾರಗಳ ಖಾತೆ ಮತ್ತು ಸಂಸದೀಯ ವ್ಯವಹಾರಗಳ 

* ರೇಣುಕಾ ಸಿಂಗ್‌ ಸರುತಾ- ಬುಡಕಟ್ಟು ವ್ಯವಹಾರಗಳ

* ಸೋಮ್ ಪ್ರಕಾಶ್- ವಾಣಿಜ್ಯ ಮತ್ತು ಕೈಗಾರಿಕೆ ಖಾತೆ 

* ರಾಮೇಶ್ವರ ತೆಲಿ- ಆಹಾರ ಸಂಸ್ಕರಣೆ ಉದ್ಯಮ ಖಾತೆ 

* ಪ್ರತಾಪ್ ಚಂದ್ರ ಸಾರಂಗಿ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ/ ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ ಖಾತೆ

* ಕೈಲಾಶ್ ಚೌಧರಿ- ಕೃಷಿ ಮತ್ತು ರೈತರ ಕಲ್ಯಾಣ

* ದೇಬಶ್ರೀ ಚೌಧರಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ