ಮೋದಿ ಶ್ರೀ ಕೃಷ್ಣನ 11ನೇ ಅವತಾರವಂತೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 29, Jul 2018, 9:38 AM IST
Narendra Modi Is the Avatar Of Lord Krishna
Highlights

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕೃಷ್ಣನ 11ನೇ ಅವತಾರವಾಗಿ ಜನ್ಮ ತಾಳಿದ್ದಾರೆ. ದೇಶದ ಒಳಿತಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು  ಶಾಸಕ ಸಿದ್ದು ಸವದಿ ಶ್ಲಾಘಿಸಿದ್ದಾರೆ. 

ರಬಕವಿ-ಬನಹಟ್ಟಿ: ದೇಶದ ಒಳಿತಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀಕೃಷ್ಣನ 11 ನೇ ಅವತಾರ ಆಗಿ ಕಾರ್ಯ ನಿರ್ವಹಿ ಸುತ್ತಿದ್ದಾರೆ ಎಂದು ಶಾಸಕ ಸಿದ್ದು ಸವದಿ ಶ್ಲಾಘಿಸಿದ್ದಾರೆ. 

ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ಉಜ್ವಲ್ ಯೋಜನೆಯಲ್ಲಿ ಫಲಾನುಭವಿ ಗಳಿಗೆ ಅಡುಗೆ ಅನಿಲ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿನ ಬಡತನ ಕಿತ್ತು ಹಾಕಲು ಮತ್ತು ಜಗತ್ತಿಗೆ ಭಾರತದ ಬೆಳಕು ಚೆಲ್ಲಲು ಹಗಲಿರಳು ಶ್ರಮಿಸುತ್ತಿದ್ದಾರೆ. 

 ಇಂತಹ ಮಹಾನ್ ನಾಯಕನನ್ನು ಮತ್ತೊಮ್ಮೆ ಬೆಂಬಲಿ ಸೋಣ. ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ಏಕೈಕ ಪ್ರಧಾನ ಮಂತ್ರಿ ಮೋದಿ ಎಂದು ಬಣ್ಣಿಸಿದರು.

loader