ಸೇನೆಗೆ ತುರ್ತಾಗಿ ಬೇಕಾಗಿರುವ ಶಸ್ತ್ರಾಸ್ತ್ರಗಳನ್ನು ಆದಷ್ಟು ಬೇಗ ಪೂರೈಸುವಂತೆ ಸರ್ಕಾರ ಸಂಬಂಧಿಸಿದ ಕಂಪೆನಿಗಳ ಜೊತೆ ಮಾತುಕತೆ ನಡೆಸಿದೆ.

ನವದೆಹಲಿ(ಅ.10): ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದ ಬೆನ್ನಲ್ಲೇ ನಿಗದಿಯಂತೆ ಶಸ್ತ್ರಾಸ್ತ್ರ ಪೂರೈಸುವಂತೆ ಸರ್ಕಾರ ಗುತ್ತಿಗೆ ನೀಡಿದ ಕಂಪೆನಿಗಳಿಗೆ ಸೂಚಿಸಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಗೆ ತುರ್ತಾಗಿ ಬೇಕಾಗಿರುವ ಶಸ್ತ್ರಾಸ್ತ್ರಗಳನ್ನು ಆದಷ್ಟು ಬೇಗ ಪೂರೈಸುವಂತೆ ಸರ್ಕಾರ ಸಂಬಂಧಿಸಿದ ಕಂಪೆನಿಗಳ ಜೊತೆ ಮಾತುಕತೆ ನಡೆಸಿದೆ. ಅಲ್ಲದೆ ಅಗತ್ಯಬಿದ್ದರೆ ಒಪ್ಪಂದಕ್ಕಿಂತ ಹೆಚ್ಚಿನ ಶಸ್ತ್ರಾಸ್ತ್ರ ಬೇಕಾದಲ್ಲಿ ಪೂರೈಸಲು ಸಿದ್ದರಿರಬೇಕು ಎಂದು ಕಂಪೆನಿಗಳಿಗೆ ಸೂಚಿಸಿದೆ ಎನ್ನಲಾಗಿದೆ.

ಸರ್ಜಿಕಲ್ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಒಂದು ರೀತಿಯ ಅಂತರ ಬೆಳೆದಿದ್ದು, ಭಾರತ ಲಘು ಶಸ್ತ್ರಾಸ್ತ್ರ, ಸುಖೋಯ್, ಮೀರಜ್ ಫೈಟರ್'ಗಳ ಬಿಡಿ ಭಾಗಗಳ ಪೂರೈಕೆಗೆ ರಕ್ಷಣ ಸಚಿವಾಲಯ ಹೆಚ್ಚಿನ ಆದ್ಯತೆ ನೀಡಿದೆ.