ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ₹ ೧,೧೦೦ ಕೋಟಿ ಕೇವಲ ಜಾಹೀರಾತುಗಳಿಗಾಗಿ ಖರ್ಚು ಮಾಡಿದೆ. ಆರ್‌ಟಿಐ ಕಾರ್ಯಕರ್ತ ರಾಮ್‌ವೀರ್ ಸಿಂಗ್ ಎಂಬವರು ಪಡೆದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ‘ಯಾಹೂ.ಕಾಂ’ ವೆಬ್ ವಾಹಿನಿ ವರದಿ ಮಾಡಿದೆ. ೨೦೧೪, ಜೂ. ೧ರಿಂದ ೨೦೧೬, ಆ. ೩೧ರ ವರೆಗೆ ತೆರಿಗೆದಾರರ ಹಣದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಜಾಹಿರಾತಿಗಾಗಿ ಬಳಸಲಾಗಿದೆ. ಪ್ರತಿ ದಿನಕ್ಕೆ ಸರಾಸರಿ ₹ ೧.೪ ಕೋಟಿ ವ್ಯಯಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ನವದೆಹಲಿ(ನ.30): ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ₹ ೧,೧೦೦ ಕೋಟಿ ಕೇವಲ ಜಾಹೀರಾತುಗಳಿಗಾಗಿ ಖರ್ಚು ಮಾಡಿದೆ. ಆರ್ಟಿಐ ಕಾರ್ಯಕರ್ತ ರಾಮ್ವೀರ್ ಸಿಂಗ್ ಎಂಬವರು ಪಡೆದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ‘ಯಾಹೂ.ಕಾಂ’ ವೆಬ್ ವಾಹಿನಿ ವರದಿ ಮಾಡಿದೆ. ೨೦೧೪, ಜೂ. ೧ರಿಂದ ೨೦೧೬, ಆ. ೩೧ರ ವರೆಗೆ ತೆರಿಗೆದಾರರ ಹಣದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಜಾಹಿರಾತಿಗಾಗಿ ಬಳಸಲಾಗಿದೆ. ಪ್ರತಿ ದಿನಕ್ಕೆ ಸರಾಸರಿ ₹ ೧.೪ ಕೋಟಿ ವ್ಯಯಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ಈ ಮೊತ್ತ ಕೇವಲ ಟಿವಿ, ಇಂಟರ್ನೆಟ್ ಮತ್ತಿತರ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ವ್ಯಯಿಸಿದ್ದು. ಮುದ್ರಣ ಮಾಧ್ಯಮ ಜಾಹಿರಾತುಗಳು, ಹೋರ್ಡಿಂಗ್ಗಳು, ಪೋಸ್ಟರ್ಗಳು, ಬುಕ್ಲೆಟ್ಗಳು ಮತ್ತು ಕ್ಯಾಲೆಂಡರ್ಗಳಿಗೆ ವ್ಯಯಿಸಲಾದ ಮೊತ್ತ ಇದರಲ್ಲಿ ಸೇರಿಲ್ಲ. ಇವುಗಳಿಗೆ ವ್ಯಯಿಸಲಾದ ಮೊತ್ತವನ್ನೂ ಸೇರಿಸಿದರೆ, ಇದು ಇನ್ನೂ ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಹಿಂದೆ ದೆಹಲಿಯ ಆಪ್ ಸರ್ಕಾರ ದಿನಕ್ಕೆ ₹ ೧೬ ಲಕ್ಷ ಜಾಹೀರಾತಿಗೆ ವ್ಯಯಿಸುತ್ತದೆ ಎಂಬ ಮಾಹಿತಿ ಇದೇ ರೀತಿ ಆರ್ಟಿಐ ಅರ್ಜಿ ಮೂಲಕ ಬಹಿರಂಗಗೊಂಡಿದ್ದಾಗ, ಸಿಎಂ ಅರವಿಂದ ಕೇಜ್ರಿವಾಲ್ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.
