ಬರೌನಿ (ಬಿಹಾರ): ‘ನಿಮ್ಮ ಎದೆಯೊಳಗೆ ಹೊತ್ತಿಕೊಂಡಿರುವ ಬೆಂಕಿ ನನ್ನ ಹೃದಯದಲ್ಲೂ ಹೊತ್ತಿಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ಹೇಳಿದ್ದಾರೆ. 

ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಹುತಾತ್ಮರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಸಮಾವೇಶದಲ್ಲಿ ಭಾರಿ ಪ್ರಮಾಣದ ಜನರು ನೆರೆದಿದ್ದೀರಿ. 

ನಿಮ್ಮ ಎದೆಯೊಳಗೆ ಹೊತ್ತಿಕೊಂಡ ಬೆಂಕಿ ನನ್ನ ಹೃದಯದೊಳಗೂ ಹೊತ್ತಿಕೊಂಡಿದೆ’ ಎಂದು ಮಾರ್ಮಿಕವಾಗಿ ನುಡಿದರು.