ಅಮೆರಿಕ ಅಧ್ಯಕ್ಷರಾದ ಬಳಿಕ ಟ್ರಂಪ್‌ ಮತ್ತು ಮೋದಿ ಅವರದ್ದು ಚೊಚ್ಚಲ ಭೇಟಿ ಇದಾಗಿದೆ.

ನವದೆಹಲಿ(ಜೂ.24): ಪ್ರಧಾನಿ ನರೇಂದ್ರ ಮೋದಿ, ಇಂದಿನಿಂದ ಪೋರ್ಚುಗಲ್‌, ಅಮೆರಿಕ ಮತ್ತು ನೆದರ್‌'ಲ್ಯಾಂಡ್‌ ಸಹಿತ ಮೂರು ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಇಂದು ಪೋರ್ಚುಗಲ್‌'ಗೆ ಭೇಟಿ ನೀಡಲಿರುವ ಮೋದಿ, ಭಾನುವಾರ ಮತ್ತು ಸೋಮವಾರ ಅಮೆರಿಕದಲ್ಲಿರಲಿದ್ದಾರೆ. ಸೋಮವಾರ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಟ್ರಂಪ್‌ ಮತ್ತು ಮೋದಿ ಅವರದ್ದು ಚೊಚ್ಚಲ ಭೇಟಿ ಇದಾಗಿದೆ.

ಆ ಬಳಿಕ ಮಂಗಳವಾರ ನೆದರ್‌'ಲ್ಯಾಂಡ್‌'ಗೆ ಭೇಟಿ ನೀಡಿ, ಅಲ್ಲಿನ ರಾಷ್ಟ್ರ ನಾಯಕರೊಂದಿಗೆ ಮಾತುಕತೆ ನಡೆಸಿ, ಅವರು ಸ್ವದೇಶಕ್ಕೆ ಮರಳಲಿದ್ದಾರೆ.

‘ಜೂ. 27ರಂದು ನಾನು ನೆದರ್‌'ಲ್ಯಾಂಡ್‌'ಗೆ ಭೇಟಿ ನೀಡಲಿದ್ದೇನೆ. ಅಲ್ಲಿ ಭಾರತ-ಡಚ್‌ ರಾಜತಾಂತ್ರಿಕ ಸಂಬಂಧದ 70ನೇ ವರ್ಷಾಚರಣೆಯಲ್ಲಿ ಭಾಗವಹಿಸಲಿದ್ದೇನೆ' ಎಂದು ಮೋದಿ ತಮ್ಮ ಫೇಸ್‌'ಬುಕ್‌ ಪೋಸ್ಟ್‌ನ'ಲ್ಲಿ ತಿಳಿಸಿದ್ದಾರೆ.