ಐಟಿ ಕಂಪನಿಗಳಲ್ಲಿ ಹಿರಿಯ ವ್ಯವಸ್ಥಾಪಕರು ತಮಗೆ ತಾವೇ ಭಾರೀ ಪ್ರಮಾಣದಲ್ಲಿ ವೇತನ ಏರಿಕೆ ಮಾಡಿಕೊಳ್ಳುವುದು ಸಮಂಜಸ ಅಲ್ಲ ಎಂದು ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

ಮುಂಬೈ (ಡಿ.25): ಐಟಿ ಕಂಪನಿಗಳಲ್ಲಿ ಹಿರಿಯ ವ್ಯವಸ್ಥಾಪಕರು ತಮಗೆ ತಾವೇ ಭಾರೀ ಪ್ರಮಾಣದಲ್ಲಿ ವೇತನ ಏರಿಕೆ ಮಾಡಿಕೊಳ್ಳುವುದು ಸಮಂಜಸ ಅಲ್ಲ ಎಂದು ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಂಬೆ ಐಐಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಫ್ಟವೇರ್ ಕಂಪನಿಗಳಲ್ಲಿ ಕಿರಿಯರು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ವೇತನ ಏರಿಕೆ ನಿರಾಕರಿಸುತ್ತಿರುವ ಬೆಳವಣಿಗೆ ಕಳವಳಕಾರಿ.

ಉನ್ನತ ಹುದ್ದೆಯಲ್ಲಿ ಇರುವವರು ಭಾರೀ ಮಟ್ಟದ ವೇತನ ಏರಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಬಂಡವಾಳ ಶಾಹಿತ್ವ ಒಪ್ಪತಕ್ಕದ್ದಲ್ಲ. ದೇಶದಲ್ಲಿ ಹೆಚ್ಚಿನ ಜನರು ಬಡತನ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.