ಭಾರತದ ಪ್ರತಿ ಪ್ರಜೆಗೂ ವಿಶಿಷ್ಟಗುರುತಿನ ಚೀಟಿ ನೀಡುವ ಆಧಾರ್‌ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಇಸ್ಫೋಸಿಸ್‌ನ ಸಂಸ್ಥಾಪಕ ಸದಸ್ಯ, ಕನ್ನಡಿಗ ನಂದನ್‌ ನಿಲೇಕಣಿ, ಇದೀಗ ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿ ಹೊಣೆ ಹೊರುವ ಸಾಧ್ಯತೆ ಇದೆ.

ನವದೆಹಲಿ: ಭಾರತದ ಪ್ರತಿ ಪ್ರಜೆಗೂ ವಿಶಿಷ್ಟಗುರುತಿನ ಚೀಟಿ ನೀಡುವ ಆಧಾರ್‌ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಇಸ್ಫೋಸಿಸ್‌ನ ಸಂಸ್ಥಾಪಕ ಸದಸ್ಯ, ಕನ್ನಡಿಗ ನಂದನ್‌ ನಿಲೇಕಣಿ, ಇದೀಗ ಕೇಂದ್ರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಜಾರಿ ಹೊಣೆ ಹೊರುವ ಸಾಧ್ಯತೆ ಇದೆ.

ಮೋದಿ ಸರ್ಕಾರ, ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಿದ ಬೃಹತ್‌ ಆರೋಗ್ಯ ವಿಮಾ ಯೋಜನೆ ಜಾರಿಗೆ ಅಗತ್ಯವಾದ ಐಟಿ ಮೂಲ ಸೌಕರ್ಯ ರಚನೆಗೆ, ನಂದನ ನಿಲೇಕಣಿ ಅವರ ನೆರವು ಪಡೆಯಲು ನಿರ್ಧರಿಸಿದೆ. ಸುಮಾರು 10 ಕೋಟಿ ಕುಟುಂಬಗಳ 50 ಕೋಟಿ ಜನ ಯೋಜನೆಯ ಫಲಾನುಭವಿಗಳು ಆಗಲಿರುವುದರಿಂದ ಅವರೆಲ್ಲರ ಆಧಾರ್‌ ಅಗತ್ಯವಿದ್ದು, ಅದಕ್ಕೆ ನೀಲೆಕಣಿ ಸಹಾಯ ಪಡೆಯಬೇಕಾಗಿದೆ.

ಅಲ್ಲದೆ, ಕಾರ್ಯಕ್ರಮ ಸಮರ್ಪಕವಾಗಿ ಜಾರಿಗೊಳ್ಳಲು ಬೇಕಾದ ಐಟಿ ಮೂಲಸೌಕರ್ಯಗಳನ್ನು ಕೂಡ ಪಡೆಯಲು ಉದ್ದೇಶಿಸಲಾಗಿದೆ. ನೀಲೆಕಣಿ ಜೊತೆ ಸಮಾಲೋಚನೆ ನಡೆಸಿದ್ದೇವೆ. ಎನ್‌ಎಚ್‌ಪಿಎಸ್‌ ಯೋಜನೆಗೆ ಆಧಾರ್‌ ಮಾದರಿಯ ವ್ಯವಸ್ಥೆ ಸೃಷ್ಟಿಸಬೇಕಾಗಿದೆ. ಅದಕ್ಕೆ ಅವರು ಒಪ್ಪಿದ್ದಾರೆ ಎಂದು ನೀತಿ ಆಯೋಗದ ಮೂಲಗಳು ತಿಳಿಸಿವೆ.