ಜನಾಭಿಪ್ರಾಯ ಸಂಗ್ರಹಿಸಲು 'ನನಗೆ ನೇರವಾಗಿ ಅಭಿಪ್ರಾಯ ತಿಳಿಸಿ' ಎಂದು ಪಿಎಂ ನರೇಂದ್ರ ಮೋದಿ ದೇಶದ ಜನತೆಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ತಾವು ಮಾಡಿರುವ ಟ್ವೀಟ್'ನಲ್ಲಿ ಅಭಿಪ್ರಾಯ ತಿಳಿಸಬೇಕಾದ ಆ್ಯಪ್ ಲಿಂಕ್'ನ್ನೂ ಸೇರಿಸಿದ್ದು, ಇದು ನೀವು ಅಭಿಪ್ರಾಯ ನೀಡಬೇಕಾದ ಮತ್ತೊಂದು ಪೇಜ್'ಗೆ ರಿ ಡೈರೆಕ್ಸ್ ಮಾಡುತ್ತದೆ. ಕರೆನ್ಸಿ ಸರ್ವೆಯ ಈ 'NM App'(Narendra Modi App) ಗೂಗಲ್ ಪ್ಲೇ ಸ್ಟೋರ್'ನಲ್ಲಿ ಲಭ್ಯವಿದ್ದು ನೀವೂ ನಿಮ್ಮ ಅನಿಸಿಕೆ ತಿಳಿಸಬಹುದಾಗಿದೆ.
ನವದೆಹಲಿ(ನ.22): ಸದ್ಯ ದೇಶಾದ್ಯಂತ ನೋಟ್ ಬ್ಯಾನ್'ನದ್ದೇ ಸದ್ದು. 13 ದಿನಗಳಾದರೂ ಈ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಜನಸಾಮಾನ್ಯರಿಗೆ ಈ ನೋಟಿನ ಬಿಸಿ ತಟ್ಟಿದೆ. ಕೆಲವರು ದೇಶದ ಭವಿಷ್ಯಕ್ಕಾಗಿ ಈ ಬೆಳವಣಿಗೆ ಯುತ್ತಮವೆಂದರೆ, ಮತ್ತೆ ಕೆಲವರು ನೋಟ್ ಬ್ಯಾನ್ ನಿರ್ಧಾರ ಸರಿಯಲ್ಲ ಎನ್ನುತ್ತಿದ್ದಾರೆ. ಇದು ರಾಜಕೀಯ ಸಮರಕ್ಕೂ ಕಾರಣವಾಗಿದೆ. ಆದರ ಇವೆಲ್ಲದರ ಮಧ್ಯೆ ದೇಶದ ಜನರ ಅಭಿಪ್ರಾಯ ತಿಳಿದುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.