ನಮ್ಮ ಮೆಟ್ರೊ ಸಂಚಾರ  4 ದಿನಗಳ ಕಾಲ ಬಂದ್ ಆಗಲಿದೆ. ನಗರದ ಹಸಿರು ಮಾರ್ಗದ 3 ನಿಲ್ದಾಣಗಳಾದ ಸಂಪಿಗೆ ರಸ್ತೆ , ಶ್ರೀರಾಮ ಪುರ, ಮತ್ತು ಕುವೆಂಪು ರಸ್ತೆ ನಿಲ್ದಾಣದಲ್ಲಿ ಸಂಚಾರ ವ್ಯತ್ಯಯ ಆಗಲಿದೆ.

ಬೆಂಗಳೂರು ((ಏ.04): ಉತ್ತರ ಮತ್ತು ದಕ್ಷಿಣವನ್ನು ಸಂಪರ್ಕಿಸುವ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಎರಡು ದಿನಗಳ ಕಾಲ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಮಂಗಳವಾರ ರಾತ್ರಿ 8ಗಂಟೆಯಿಂದ 11ಗಂಟೆವರೆಗೆ, ಏಪ್ರಿಲ್ 5 ಮತ್ತು 6ರಂದು ಬೆಳಗ್ಗೆ 5ರಿಂದ 7ರವರೆಗೆ ಹಾಗೂ ರಾತ್ರಿ 8ರಿಂದ 11ರವರೆಗೆ ಹಾಗೂ ಏಪ್ರಿಲ್ 7ರಂದು ಬೆ.5ರಿಂದ 7ರವರೆಗೆ ಹಸಿರು ಮಾರ್ಗದ ಸಂಪಿಗೆ ರಸ್ತೆ ನಿಲ್ದಾಣ, ಶ್ರೀರಾಂಪುರ ಹಾಗೂ ಕುವೆಂಪು ರಸ್ತೆ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಿರುವುದಿಲ್ಲ. ಈ ದಿನಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 8ರವರೆಗೆ ನಾಗಸಂದ್ರದಿಂದ ಸಂಪಿಗೆ ರಸ್ತೆವರೆಗೆ ಮೆಟ್ರೋ ಎಂದಿನಂತೆ ಸಂಚರಿಸಲಿದೆ ಎಂದು ಬೆಂಗಳೂರು ಮೆಟ್ರೋ ನಿಗಮ(ಬಿಎಂಆರ್‌ಸಿಎಲ್) ಪ್ರಕಟಣೆ ತಿಳಿಸಿದೆ.