ರಾಜ್ಯ ಸರ್ಕಾರದ ಹಣದ ಹೊರೆಯನ್ನ ಇಳಿಸಲು ಮೆಟ್ರೋ ನಿಗಮ ಈಗ ಹೊಸದೊಂದು ಪ್ಲಾನ್ ರೆಡಿ ಮಾಡಿದೆ. ಮೆಟ್ರೋ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸಾವಿರಾರೂ ಕೋಟಿ ರೂಪಾಯಿ , ಕೆಲವರ ಕೆಂಗಣ್ಣಿಗೆ ಗುರಿಯಾಗಿದು ಸಾಕಷ್ಟು ಆಕ್ಷೇಪಗಳು ಬರುತ್ತಿವೆ. ಹೀಗಾಗಿ ಈಗ ಮೆಟ್ರೋ ನಿಗಮ ತನ್ನ ಕಾಮಗಾರಿ ವೆಚ್ಚವನ್ನ, ತಾನೇ ಭರಿಸುವ ಪ್ಲಾನ್ವೊಂದನ್ನ ಸಿದ್ಧಮಾಡಿಕೊಂಡಿದೆ.
ಬೆಂಗಳೂರು (ಮೇ.17): ರಾಜ್ಯ ಸರ್ಕಾರದ ಹಣದ ಹೊರೆಯನ್ನ ಇಳಿಸಲು ಮೆಟ್ರೋ ನಿಗಮ ಈಗ ಹೊಸದೊಂದು ಪ್ಲಾನ್ ರೆಡಿ ಮಾಡಿದೆ. ಮೆಟ್ರೋ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸಾವಿರಾರೂ ಕೋಟಿ ರೂಪಾಯಿ , ಕೆಲವರ ಕೆಂಗಣ್ಣಿಗೆ ಗುರಿಯಾಗಿದು ಸಾಕಷ್ಟು ಆಕ್ಷೇಪಗಳು ಬರುತ್ತಿವೆ. ಹೀಗಾಗಿ ಈಗ ಮೆಟ್ರೋ ನಿಗಮ ತನ್ನ ಕಾಮಗಾರಿ ವೆಚ್ಚವನ್ನ, ತಾನೇ ಭರಿಸುವ ಪ್ಲಾನ್ವೊಂದನ್ನ ಸಿದ್ಧಮಾಡಿಕೊಂಡಿದೆ.
ಈಗಾಗಲೇ ನಿರ್ಮಾಣವಾಗಿರುವ ಮೆಟ್ರೋ ನಿಲ್ದಾಣಗಳಿಗೆ ತಗುಲಿದ ವೆಚ್ಚವನ್ನು , ಖಾಸಗಿ ವ್ಯಕ್ತಿ ಅಥವಾ ಕಂಪನಿಗಳ ಭರಿಸಿದರೆ ಅವರ ಹೆಸರನ್ನು ಆಯ್ದ ಮೆಟ್ರೋ ನಿಲ್ದಾಣಗಳಿಗೆ ಹೆಸರಿಡಲಾಗುವುದು. ಒಂದು ಮೆಟ್ರೋ ನಿಲ್ದಾಣ ನಿರ್ಮಾಣವಾಗಬೇಕಾದರೆ ನೂರಾರೂ ಕೋಟಿ ರೂಪಾಯಿ ವೆಚ್ಚವಾಗುತ್ತದೆ, ಒಂದು ವೇಳೆ ಆ ವೆಚ್ಚವನ್ನ ಯಾವುದಾದರೂ ಕಂಪನಿ, ಖಾಸಗಿ ವ್ಯಕ್ತಿ ಭರಿಸಿದರೆ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಲಾಗುವುದು. ಈ ರೀತಿ ಮಾಡುವುದರಿಂದ ಮೆಟ್ರೋ ನಿಗಮಕ್ಕೆ ಸಾವಿರಾರು ರೂ ಕೋಟಿ ಹಣ ಬರುವುದು. ಮುಂದಿನ ಕಾಮಗಾರಿಗೆ ಸಹಾಯಕವಾಗಲಿದೆಯಂತೆ. ಅಷ್ಟೇ ಅಲ್ಲದೆ ಸರ್ಕಾರ ಮೆಟ್ರೋ ನಿಗಮಕ್ಕೆ ನೀಡುತ್ತಿರುವ ಅನುದಾನದ ಭಾರ ಕೂಡಾ ಕಡಿಮೆಯಾಗಲಿದೆ ಎಂದು ಮೆಟ್ರೋ ಎಂ.ಡಿ ಪ್ರದೀಪ್ ಸಿಂಗ್ ಖರೋಲಾ ಸುವರ್ಣನ್ಯೂಸ್ಗೆ ತಿಳಿಸಿದ್ದಾರೆ .
