ಮಾ. 22 ಮೆಟ್ರೋ ಸೇವೆ ಇರುತ್ತಾ? ಹಗ್ಗ ಜಗ್ಗಾಟದಲ್ಲಿದ್ದಾರೆ ಸಿಬ್ಬಂದಿ-ಆಡಳಿತ ಮಂಡಳಿ

Namma Metro Protest
Highlights

ಮೆಟ್ರೋ ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಸಂಘರ್ಷ ಮುಂದುವರೆದಿದೆ. 

ಬೆಂಗಳೂರು (ಮಾ. 09): ಮೆಟ್ರೋ ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಸಂಘರ್ಷ ಮುಂದುವರೆದಿದೆ. 

22 ರ ಮೆಟ್ರೋ ನೌಕರರ ಮುಷ್ಕರಕ್ಕೆ ಹತ್ತಿಕ್ಕಲು ಎಸ್ಮಾ ಜಾರಿ ಬೆದರಿಕೆ ಹಿನ್ನೆಲೆ ಸಂಘದಿಂದ ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ.  ರಾಜ್ಯ ಸರ್ಕಾರಕ್ಕೆ ಮೆಟ್ರೋ ನೌಕರರ ಮೇಲೆ ಎಸ್ಮಾ ಜಾರಿ ಮಾಡೋಕೆ ಬರುವುದಿಲ್ಲ. ಬಿಎಂಆರ್’ಸಿಲ್  ಒಂದು ಕೇಂದ್ರ ಸರ್ಕಾರದ ಉದ್ಯಮ. ಕೇಂದ್ರ ಸರ್ಕಾರದ ಎಸ್ಮಾ ಜಾರಿ ಅನ್ವಯವಾಗುತ್ತೆ ಹೊರತು ರಾಜ್ಯ ಸರ್ಕಾರಕ್ಕೆ ಅನ್ವಯವಾಗುವುದಿಲ್ಲ.

ಮಾರ್ಚ್ 22 ರಂದು ಮೆಟ್ರೋ ಸೇವೆ ಸ್ಥಗಿತ ಮಾಡುತ್ತೇವೆ.  ನಮ್ಮ ಮುಷ್ಕರವನ್ನ ನೋಡಿ ಮೆಟ್ರೋ ಎಂಡಿ ಎಸ್ಮಾ ಬೆದರಿಕೆ ಹಾಕಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ತೆಗೆದುಕೊಳ್ಳುವುದಿಲ್ಲ. ವೇತನ ಹೆಚ್ಚಳ ಸೇರಿದಂತೆ ಮೆಟ್ರೋ ಅಧಿಕಾರಿಗಳ ಕಿರುಕುಳ ನಿಲ್ಲಬೇಕು. 8 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮೆಟ್ರೋ ನೌಕರರಿಗೆ ಬಡ್ತಿಗೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘ ಒತ್ತಾಯಿಸಿದೆ. 
ಇನ್ನಷ್ಟು ಬೇಡಿಕೆಗಳನ್ನ ಕೂಡಲೆ ಬಗೆಹರಿಸಬೇಕೆಂದು ಸಂಘದ  ಒತ್ತಾಯ. ಮಾತುಕತೆಗೆ ಕರೆದು ಬೇಡಿಕೆಗಳನ್ನಾ ಈಡೇರಿಸಿದರೆ ಕರೆ ಕೊಟ್ಟಿರುವ ಮುಷ್ಕರ ವಾಪಸ್ ಪಡೆಯುತ್ತೇವೆ ಎಂದು  ಮೆಟ್ರೋ ಯೂನಿಯನ್ ಅಧ್ಯಕ್ಷ ಸೂರ್ಯನಾರಾಯಣ ಹೇಳಿದ್ದಾರೆ.  

loader