ಸದ್ಯ ಪ್ರತಿ ನಿತ್ಯ ಬೆಳಗ್ಗೆ 6 ರಿಂದ ರಾತ್ರಿ 11ರವರೆಗೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ದೀಪಾವಳಿ ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ಓಡಾಡುವ ಹಿನ್ನಲೆಯಲ್ಲಿ ರಾತ್ರಿ 12ರವರೆಗೆ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ಆಡಳಿತ ಮಂಡಳಿ ಚಿಂತನೆ ನಡೆಸಿದೆ. 

ಬೆಂಗಳೂರು(ಅ.290): ದೀಪಾವಳಿ ಹಬ್ಬದ ಹಿನ್ನೆಲೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದ್ದು, ನಾಳೆಯಿಂದ 3 ದಿನಗಳ ಕಾಲ ಮೆಟ್ರೋ ಸಂಚಾರ ಅವಧಿ ವಿಸ್ತರಣೆ ಮಾಡಲು ಚಿಂತನೆ ನಡೆದಿದೆ. ಈ ಹಿನ್ನಲೆಯಲ್ಲಿ ರಾತ್ರಿ 12ರವರೆಗೆ ಮೆಟ್ರೋ ರೈಲು ಓಡಾಡಲಿದೆ. 

ಸದ್ಯ ಪ್ರತಿ ನಿತ್ಯ ಬೆಳಗ್ಗೆ 6 ರಿಂದ ರಾತ್ರಿ 11ರವರೆಗೆ ಮೆಟ್ರೋ ಸಂಚಾರ ನಡೆಯುತ್ತಿದ್ದು, ದೀಪಾವಳಿ ಹಬ್ಬದ ಹಿನ್ನೆಲೆ ಹೆಚ್ಚಿನ ಸಂಖ್ಯೆಯ ಜನರು ಓಡಾಡುವ ಹಿನ್ನಲೆಯಲ್ಲಿ ರಾತ್ರಿ 12ರವರೆಗೆ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ಆಡಳಿತ ಮಂಡಳಿ ಚಿಂತನೆ ನಡೆಸಿದೆ. 

ಪ್ರಯಾಣಿಕರ ಸಂಖ್ಯೆ ಆಧರಿಸಿ ಹೆಚ್ಚಿನ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡವ ಸಲುವಾಗಿಯೂ ಚಿಂತನೆ ನಡೆದಿದ್ದು, ಇದಲ್ಲದೇ ಪ್ರತಿ 5 ನಿಮಿಷಕ್ಕೊಮ್ಮೆ ಮೆಟ್ರೋ ಓಡಿಸಲು ನಿರ್ಧಾರ ಮಾಡಲಾಗದೆ ಎಂದು ಸುವರ್ಣನ್ಯೂಸ್​ಗೆ ಮೆಟ್ರೋ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. 

ಇದಲ್ಲದೇ ದೀಪಾವಳಿ ಹಬ್ಬ ದ ಹಿನ್ನಲೆಯಲ್ಲಿ ಮೆಟ್ರೋ ರೈಲಿನಲ್ಲಿ ಪಟಾಕಿ ಸಾಮಗ್ರಿಗಳನ್ನು ಸಾಗಿಸದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಮೆಟ್ರೋ ನಿಲ್ದಾಣಕ್ಕೆ ಪಟಾಕಿ ಸಾಮಗ್ರಿಗಳನ್ನು ತರದಂತೆ ನಿಷೇಧ ವಿಧಿಸಿದ್ದಾರೆ.