#Namma MetroHindiBeda ಆಂದೋಲನದ ಯಶಸ್ಸಿನ ನಂತರ ಈಗ #Non-Kannadiga Engineers Beda ಆನ್'ಲೈನ್ ಆಂದೋಲನ ನಡೆಸಲು ಚಿಂತಿನೆ ನಡೆಸಲಾಗಿದೆ ಎಂದು ಇಂಗ್ಲೀಷ್ ಸುದ್ದಿವಾಹಿನಿ ವರದಿ ಮಾಡಿದೆ.
ಬೆಂಗಳೂರು (ಜು.28): #Namma MetroHindiBeda ಆಂದೋಲನದ ಯಶಸ್ಸಿನ ನಂತರ ಈಗ #Non-Kannadiga Engineers Beda ಆನ್'ಲೈನ್ ಆಂದೋಲನ ನಡೆಸಲು ಚಿಂತಿನೆ ನಡೆಸಲಾಗಿದೆ ಎಂದು ಇಂಗ್ಲೀಷ್ ಸುದ್ದಿವಾಹಿನಿ ವರದಿ ಮಾಡಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಸ್ಥ ಎಸ್.ಜಿ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ನಮ್ಮ ಮೆಟ್ರೋದಲ್ಲಿ ಕನ್ನಡಿಗರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಬಿಎಂಆರ್'ಸಿಗೆ ಶಿಫಾರಸ್ಸು ಮಾಡಿ ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಬಿಎಂಆರ್'ಸಿಯಲ್ಲಿ 7 ಕನ್ನಡೇತರ ಎಂಜಿನೀಯರ್'ಗಳಿದ್ದಾರೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಎಂಜಿನೀಯರಿಂಗ್ ಕಾಲೇಜುಗಳಿವೆ. ಸಾಕಷ್ಟು ಕನ್ನಡಿಗರು ಅರ್ಹತೆಯನ್ನು ಹೊಂದಿದ್ದಾರೆ. ಕನ್ನಡೇತರರನ್ನು ನೇಮಕ ಮಾಡಿಕೊಳ್ಳುವುದು ಸರೋಜಿನಿ ಮಯಿಷಿ ವರದಿಯನ್ನು ಉಲ್ಲಂಘಿಸಿದಂತೆ. ಕನ್ನಡೇತರ ಎಂಜಿನೀಯರ್'ಗಳನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸರ್ಕಾರ ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡೇತರರನ್ನು ಕೆಲಸದಿಂದ ತೆಗೆದು ಹಾಕಿ ಅವರ ಜಾಗಕ್ಕೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಇವರ ಪ್ರಸ್ತಾವನೆಯನ್ನು ಒಪ್ಪಿದ್ದೇ ಆದಲ್ಲಿ ಕನ್ನಡೇತರರಿಗೆ ಕಗ್ಗಂಟಾಗಿ ಪರಿಣಮಿಸಲಿದೆ. ಈ ಚಿಂತನೆ ವಿಷವಾಗಿ ಪರಿಣಮಿಸಲಿದೆ.
