Asianet Suvarna News Asianet Suvarna News

ಶರಾವತಿ ಕಣಿವೆಯ ದಟ್ಟ ಕಾಡಿನ ಹೆದ್ದಾರಿಯಲ್ಲಿ ಬಸ್ ಅಡ್ಡಗಟ್ಟಿದ ಯುವಕರ ತಂಡ!

ವರ್ಷಕ್ಕೆ ಒಂದು ದಿನವನ್ನು ಪರಿಸರ ದಿನ ಎಂದು ಆಚರಣೆ ಮಾಡಿ ನಾವೆಲ್ಲ ಸುಮ್ಮನಾಗುತ್ತೇವೆ.  ಫೋಟೋಗೆ ಪೋಸ್ ಕೊಡಲೆಂದು ನೆಟ್ಟ ಗಿಡ ಬದುಕಿದೆಯೋ.. ಸತ್ತಿದೆಯೋ ಎಂದು ನೋಡುವ ಗೋಜಿಗೂ ಅನೇಕರು ಹೋಗುವುದಿಲ್ಲ.  ಹಾಗಾದರೆ ಪರಿಸರ ದಿನ ಕೇವಲ ದಿನಾಚರಣೆಗೆ ಸೀಮಿತವೇ?

Namma Honnavar youth team Environment awareness initiative
Author
Bengaluru, First Published Jun 6, 2019, 11:57 PM IST

ಕಾರವಾರ[ಜೂ.06] ಕಾಡಂಚಿನ ದಾರಿಯಲ್ಲಿ ಬಸ್ ಸಾಗುವಾಗ ಪರಿಸರವನ್ನು ಆಸ್ವಾದಿಸುವುದಕ್ಕಿಂತ ದೊಡ್ಡ ಸುಖ ಇನ್ನೇನಿದೆ? ಆದರೆ ಅದೆ ಕಾಡಂಚನಿ ದಾರಿಗೆ ಕುಡಿದು ಖಾಲಿಯಾದ ನೀರಿನ ಬಾಟಲ್, ತಿಂದು ಖಾಲಿ ಮಾಡಿದ ಚಿಪ್ಸ್ ಪೊಟ್ಟಣ ಎಸೆಯುತ್ತ ನಮ್ಮ ಭಾರ ಇಳಿಯಿತು ಎಂದು ಮುಂದಕ್ಕೆ ಸಾಗಿ ಬಿಡುತ್ತೇವೆ.

ನಮ್ಮ ಭಾರವೇನೋ ಇಳಿಯಿತು. ಆದರೆ ನಿಸರ್ಗದ ಮೇಲೆ ಇದರ ಪರಿಣಾಮ? ಊಹಿಸಲು ಅಸಾಧ್ಯ. ಅಳಿಯದ ಕಸವಾಗಿಜೀವ ಜಲ, ಹಸಿರು ಭೂಮಿ ಸೇರಿಕೊಳ್ಳುವ ಪ್ಲಾಸ್ಟಿಕ್ ಎಂಬ ಪರಿಸರ ವಿರೋಧಿ ಕಣ್ಣಿಗೆ ಕಾಣದೇ ಕೂತು ಧೂರ್ತ ನಗೆ ಬೀರುತ್ತ ಇರುತ್ತದೆ.

ಪರಿಸರ ಕಾಪಾಡಲು ಡಿ ಬಾಸ್ ಸೂತ್ರ

ಪರಿಸರ ಉಳಿವಿಗೆ ಒಂದು ಹೆಜ್ಜೆ ಮುಂದೆ ನಿಂತು ಯೋಚನೆ ಮಾಡುತ್ತಿರುವ ನಮ್ಮ ಹೊನ್ನಾವರ ಎಂಬ ಯುವಕರ ತಂಡ ಶರಾವತಿ ಕಣಿವೆ ಮತ್ತು ಹೊನ್ನಾವರ ಮಾರ್ಗದಲ್ಲಿ ಸಂಚರಿಸುವ ಬಸ್ ಗಳಿಗೆ ಏರಿ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಯುವಕರ ಕೆಲಸಕ್ಕೊಂದು ಸಲಾಂ ಹೇಳಲೇಬೇಕು.

ನೀವು ಕೂಡಾ ಪ್ಲಾಸ್ಟಿಕ್ ಎಸೆಯಬೇಡಿ..ಎಸೆಯಲು ಬೀಡಬೇಡಿ...

Follow Us:
Download App:
  • android
  • ios