ವಿವಿಧ ಕ್ಷೇತ್ರದ ಸಾಧಕರಿಗೆ ನಮ್ಮ ಬೆಂಗಳೂರು 2018 ಪ್ರಶಸ್ತಿ ಪ್ರದಾನ

First Published 25, Mar 2018, 9:24 PM IST
Namma Bengaluru Foundation 2018 Award
Highlights

ನಮ್ಮ ಬೆಂಗಳೂರು, ಕನ್ನಡಪ್ರಭ , ಸುವರ್ಣ ನ್ಯೂಸ್ ಸಹಯೋಗದೊಂದಿಗೆ ಆಯೋಜಿಸಿದ್ದ  'ನಮ್ಮ ಬೆಂಗಳೂರು 2018 ಪ್ರಶಸ್ತಿ'ಯನ್ನು ಇವತ್ತು  ಪ್ರಧಾನ ಮಾಡಲಾಯಿತು . ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ಗಣ್ಯರು  ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಬೆಂಗಳೂರು (ಮಾ.25): ನಮ್ಮ ಬೆಂಗಳೂರು, ಕನ್ನಡಪ್ರಭ , ಸುವರ್ಣ ನ್ಯೂಸ್ ಸಹಯೋಗದೊಂದಿಗೆ ಆಯೋಜಿಸಿದ್ದ  'ನಮ್ಮ ಬೆಂಗಳೂರು 2018 ಪ್ರಶಸ್ತಿ'ಯನ್ನು ಇವತ್ತು  ಪ್ರಧಾನ ಮಾಡಲಾಯಿತು . ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ  ಗಣ್ಯರು  ಪ್ರಶಸ್ತಿ ಪ್ರಧಾನ ಮಾಡಲಾಯಿತು.

ನಮ್ಮ ಬೆಂಗಳೂರು ಫೌಂಡೇಷನ್ ಕಳೆದ 9 ವರ್ಷದಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿ ಪ್ರಶಸ್ತಿ ಪ್ರಧಾನ ಮಾಡುತ್ತಾ ಬಂದಿದೆ. ಈ ವರ್ಷವೂ ಕೂಡ ಬೆಂಗಳೂರಿನ ಎನ್ ಎಂಕೆಆರ್ ವಿ ಕಾಲೇಜ್ ನಲ್ಲಿ  ಆಡಿಟೋರಿಯಂನಲ್ಲಿ ವಿವಿಧ ಸಾದಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾ. ಸ್ವತಂತ್ರ ಕುಮಾರ್, ಸಂಸದ ರಾಜೀವ್ ಚಂದ್ರಶೇಖರ್, ನಟ ಗಣೇಶ್ , ನಟಿ ತಾರಾ ಭಾಗಿಯಾದರು.

2018 ನೇ ಸಾಲಿನ ನಮ್ಮ ಬೆಂಗಳೂರು ಪ್ರಶಸ್ತಿ

ವರ್ಷದ ನಾಗರಿಕ : ಸಂಜೀವ್ ಧ್ಯಾಮಣ್ಣವರ್  
ವರ್ಷದ ಸಾಮಾಜಿಕ ಉದ್ಯೋಗಿ : ಪ್ರಶಾಂತ್ ಎಸ್ .ಬಿ.
ಉದಯೋನ್ಮುಖ ತಾರೆ : ವಿದ್ಯಾ.ವೈ.
ವರ್ಷದ ಪತ್ರಕರ್ತ : ರಶೀದ್ ಕಪ್ಪನ್
ವರ್ಷದ ಸರ್ಕಾರಿ ಉದ್ಯೋಗಿ : ದೀಪಿಕಾ ಭಾಜಪೇಯಿ
ವರ್ಷದ ನಮ್ಮ ಬೆಂಗಳೂರಿಗ: ರುಕ್ಮಿಣಿ ಕೃಷ್ಣಸ್ವಾಮಿ

 

loader