ಕಾಶಿ ಹನುಮಾನ್ ಘಾಟ್‌'ನ ಗಂಗಾನದಿ ತಟದಲ್ಲೇ ಇರುವ ಈ ವಸತಿಗೃಹದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಇದರ ವ್ಯವಸ್ಥಾಪಕರಾದ ವೆಂಕಟೇಶ್‌ಮೂರ್ತಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ನವದೆಹಲಿ(ಆ.24): ಹಿಂದೂಗಳ ಪವಿತ್ರ ಯಾತ್ರಾ ತಾಣ ಕಾಶಿ (ವಾರಾಣಸಿ)ಯಲ್ಲಿರುವ ಕರ್ನಾಟಕ ಸರ್ಕಾರದ ಅತಿಥಿ ಗೃಹ ರಾಜ್ಯದ ಯಾತ್ರಿಗಳ ಬಳಕೆಗೆ ಮತ್ತೆ ಸಿದ್ಧವಾಗಿದೆ.
ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1923ರಲ್ಲಿ ಕಟ್ಟಿಸಿದ್ದ ಈ ವಸತಿಗೃಹವು ನವೀಕರಣ ಕಾಮಗಾರಿ ನಡೆಯುತ್ತಿದ್ದ ಕಾರಣ ಕಳೆದ 15 ತಿಂಗಳಿನಿಂದ ಮುಚ್ಚಲ್ಪಟ್ಟಿತ್ತು. ಇದೀಗ ಸುಮಾರು 2 ಕೋಟಿ ರು. ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಕ್ತಾಯಗೊಂಡಿದ್ದು ಕರ್ನಾಟಕದ ಯಾತ್ರಿಗಳಿಗೆಕೊಠಡಿ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ವಸತಿ ಗೃಹದಲ್ಲಿ 18 ಕೊಠಡಿಗಳಿವೆ. ಅದರಲ್ಲಿ 4 ಬೆಡ್'ಗಳ 12 ಕೊಠಡಿ ಇದ್ದು ಈ ಕೊಠಡಿಗೆ ಒಂದು ದಿನದ ಬಾಡಿಗೆ ₹750, ಎರಡು ಬೆಡ್'ಗಳ ಐದು ಕೊಠಡಿ ಇದ್ದು ಈ ಕೊಠಡಿಗೆ ದಿನಕ್ಕೆ ₹500, 25ರಿಂದ 30 ಮಂದಿ ಉಳಿದುಕೊಳ್ಳಬಹುದಾದ ಒಂದು ಹಾಲ್ ಇದ್ದು ದಿನದ ಬಾಡಿಗೆ ₹1000 ಆಗಿದೆ.
ಕಾಶಿ ಹನುಮಾನ್ ಘಾಟ್'ನ ಗಂಗಾನದಿ ತಟದಲ್ಲೇ ಇರುವ ಈ ವಸತಿಗೃಹದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಇದರ ವ್ಯವಸ್ಥಾಪಕರಾದ ವೆಂಕಟೇಶ್ಮೂರ್ತಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಇವರನ್ನು 05426540752 ಅಥವಾ 7081667943 ಮೂಲಕ ಸಂಪರ್ಕಿಸಬಹುದು.
