ನಲಪಾಡ್ ಹಲ್ಲೆ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಕೆ

First Published 10, May 2018, 9:48 AM IST
Nalpad Gang  attack case Charge Sheet submit to Court
Highlights

ವಿದ್ವತ್ ಮೇಲೆ ನಲಪಾಡ್ ಹ್ಯಾರಿಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಸಿಬಿ ತನಿಖಾಧಿಕಾರಿಗಳು  ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸಿಸಿಬಿ ಎಸಿಎಂಎಂ ಕೋರ್ಟ್’ಗೆ 600 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಸಿದೆ. 

ಬೆಂಗಳೂರು (ಮೇ. 10): ವಿದ್ವತ್ ಮೇಲೆ ನಲಪಾಡ್ ಹ್ಯಾರಿಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಸಿಬಿ ತನಿಖಾಧಿಕಾರಿಗಳು  ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸಿಸಿಬಿ ಎಸಿಎಂಎಂ ಕೋರ್ಟ್’ಗೆ 600 ಪುಟಗಳಷ್ಟು ಚಾರ್ಜ್ ಶೀಟ್ ಸಲ್ಲಿಸಿದೆ.  

ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಸಿಸಿಟಿವಿ ದೃಶ್ಯಗಳನ್ನ ಸಹ ಲಗತ್ತಿಸಲಾಗಿದೆ.   ನಲಪಾಡ್ , ಅರುಣ್ ಬಾಬು , ಶ್ರೀ ಕೃಷ್ಣ, ಮಂಜುನಾಥ್ , ಅಶ್ರಫ್ , ಬಾಲಕೃಷ್ಣ , ಅಭಿಶೇಕ್ ಮತ್ತು ನಾಸಿರ್ ವಿರುದ್ದ ಆರೋಪ ಪಟ್ಟಿ ಸಲ್ಲಿಸಲಾಗಿದೆ.  ಮತ್ತೊಬ್ಬ ಆರೋಪಿ ಕೃಷ್ಣ 2014 ರಿಂದಲೂ ಮೊಬೈಲ್ ಬಳಸುತ್ತಿಲ್ಲ. ವಿದೇಶದಲ್ಲಿ ಅಡಗಿರಬಹುದು. ಹುಡುಕಾಟ ನಡೆಸುತ್ತಿದ್ದೇವೆ ಎಂದು‌ ಉಲ್ಲೇಖಿಸಲಾಗಿದೆ.  

ಏನಿದು ಪ್ರಕರಣ? 

ಫೆ. 17 ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ನ ಮೇಲೆ  ನಲಪಾಡ್ ಅಂಡ್ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿತ್ತು.  ಸದ್ಯ ನಲಪಾಡ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.  ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಆರಂಭವಾಗಬೇಕಿದೆ. 

loader