ನಲಪಾಡ್ ಸರೆಂಡರ್ ಹಿಂದಿದೆ ಬಿಗ್ ಸೀಕ್ರೆಟ್!

First Published 20, Feb 2018, 9:35 AM IST
Nalapad Surrender Secret
Highlights

ಶಾಸಕ ಹ್ಯಾರಿಸ್​​ ಪುತ್ರ ಮೊಹಮ್ಮದ್​ ನಲಪಾಡ್​ ಪುಂಡಾಟಿಕೆ ಮೆರೆದು ಶರಣಾಗಲು ಒಪ್ಪದೇ ಪರಾರಿಯಾಗಿದ್ದ. ​ ಆದರೆ ಆತನನ್ನು ಶರಣಾಗುವಂತೆ ಮಾಡಿಸಿದ್ದರ ಹಿಂದೆ ಸೀಕ್ರೆಟ್ ಒಂದು ಅಡಗಿದೆ ಎನ್ನಲಾಗಿದೆ.

ಬೆಂಗಳೂರು : ಶಾಸಕ ಹ್ಯಾರಿಸ್​​ ಪುತ್ರ ಮೊಹಮ್ಮದ್​ ನಲಪಾಡ್​ ಪುಂಡಾಟಿಕೆ ಮೆರೆದು ಶರಣಾಗಲು ಒಪ್ಪದೇ ಪರಾರಿಯಾಗಿದ್ದ. ​ ಆದರೆ ಆತನನ್ನು ಶರಣಾಗುವಂತೆ ಮಾಡಿಸಿದ್ದರ ಹಿಂದೆ ಸೀಕ್ರೆಟ್ ಒಂದು ಅಡಗಿದೆ ಎನ್ನಲಾಗಿದೆ.

ಶಾಸಕ ಹ್ಯಾರಿಸ್​ ರಾಜಕೀಯ ಭವಿಷ್ಯಕ್ಕಾಗಿ ನಲಪಾಡ್  ಶರಣಾಗುವಂತೆ IPS ಅಧಿಕಾರಿಯೊಬ್ಬರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇಬ್ಬರು ಐಜಿ ದರ್ಜೆಯ ಅಧಿಕಾರಿಗಳ ಸಲಹೆ ಪಡೆದಿದ್ದ ಶಾಸಕ ಹ್ಯಾರಿಸ್​ ಮಗನನ್ನು ಶರಣಾಗುವಂತೆ ಸೂಚನೆ ನೀಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ ಐಪಿಎಸ್​ ಅಧಿಕಾರಿಗಳಿಂದ ಹ್ಯಾರಿಸ್​​ ಸಲಹೆ ಪಡೆದುಕೊಂಡಿದ್ದರು ಎನ್ನಲಾಗಿದೆ.

ಆದರೆ ಆತ ಮಾತ್ರ ಜಾಮೀನು ಸಿಗುವವರೆಗೂ ನಾನು ಬರುವುದಿಲ್ಲ ಎಂದು ಹಠ ಹಿಡಿದಿದ್ದ. ನಲಪಾಡ್​​ ಪಟಾಲಂ ಮೂಲಕ ಮಗನನ್ನು ಕರೆಸಿಕೊಂಡು ಹ್ಯಾರಿಸ್ ಸರೆಂಡರ್​ ಮಾಡಿಸಿದ್ದರು ಎನ್ನಲಾಗಿದೆ.

loader