ನಲಪಾಡ್’ಗೆ ಜೈಲಾ? ಬೇಲಾ? ಇಂದು ನಿರ್ಧಾರವಾಗುತ್ತೆ ಭವಿಷ್ಯ

news | Wednesday, March 14th, 2018
Suvarnanews Web Desk
Highlights

ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ನಡೆಸಿ ಜೈಲು ಸೇರಿರುವ ನಲಪಾಡ್​ ಹ್ಯಾರಿಸ್​ಗೆ ಇಂದು ನಿರ್ಣಾಯಕ ದಿನ. ಜಾಮೀನು ನೀಡಲು ನಿರಾಕರಿಸಿದ್ದ ಸೆಷನ್ಸ್​​ ಕೋರ್ಟ್​​ ಆದೇಶ ಪ್ರಶ್ನಿಸಿ ಹೈಕೋರ್ಟ್​ ಸಲ್ಲಿಸಿದ್ದ ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ.

ಬೆಂಗಳೂರು (ಮಾ. 14):  ಫರ್ಜಿ ಕೆಫೆಯಲ್ಲಿ ಗೂಂಡಾಗಿರಿ ನಡೆಸಿ ಜೈಲು ಸೇರಿರುವ ನಲಪಾಡ್​ ಹ್ಯಾರಿಸ್​ಗೆ ಇಂದು ನಿರ್ಣಾಯಕ ದಿನ. ಜಾಮೀನು ನೀಡಲು ನಿರಾಕರಿಸಿದ್ದ ಸೆಷನ್ಸ್​​ ಕೋರ್ಟ್​​ ಆದೇಶ ಪ್ರಶ್ನಿಸಿ ಹೈಕೋರ್ಟ್​ ಸಲ್ಲಿಸಿದ್ದ ಅರ್ಜಿಯ ಆದೇಶ ಇಂದು ಪ್ರಕಟವಾಗಲಿದೆ.

ನಲಪಾಡ್​ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, ನಲಪಾಡ್​ ಹಲ್ಲೆ ನಡೆಸಿಲ್ಲ. ಗಲಾಟೆಯೂ ಕೂಡ ಉದ್ದೇಶಪೂರ್ವಕವಾಗಿ ನಡೆದಿಲ್ಲ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಎಸ್​ಪಿಪಿ ಶ್ಯಾಮಸುಂದರ್ ವಾದ ಮಂಡಿಸಿ, ನಲಪಾಡ್​ ಘನಘೋರವಾಗಿ ಹಲ್ಲೆ ​​ನಡೆಸಿದ್ದಾನೆ. ಆರೋಪಿ ಪ್ರಭಾವಿಯಾಗಿದ್ದು, ಜಾಮೀನು ಸಿಕ್ಕರೆ ತನಿಖೆಗೆ ತೊಂದರೆಯಾಗುತ್ತದೆ. ಗಾಯಾಳು ವಿದ್ವತ್​ ಕೂಡ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ವಾದ ಪ್ರತಿವಾದ ಆಲಿಸಿರುವ ನ್ಯಾಯಪೀಠ ಇಂದು ಮಧ್ಯಾಹ್ನ 2.30ಕ್ಕೆ ಆದೇಶ ಪ್ರಕಟಿಸಲಿದೆ. ಈಗಾಗಲೇ ನಲಪಾಡ್​ 24 ದಿನಗಳ ಕಾಲ ಕಂಬಿ ಎಣಿಸಿದ್ದು, ಜಾಮೀನು ಸಿಗುತ್ತಾ..? ಅಥವಾ ಜೈಲು ವಾಸ ಮುಂದುವರೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.
 

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarnanews Web Desk