ವಿಚಾರಣೆ ವೇಳೆ ಹ್ಯಾರಿಸ್ ಪುತ್ರ ನಲಪಾಡ್ ನೀಡಿರುವ ಉತ್ತರವೇನು..?

First Published 20, Feb 2018, 9:10 AM IST
Nalapad First Day Investigation
Highlights

ಉದ್ಯಮಿ ಪುತ್ರನ ಮೇಲೆ ದರ್ಪ ಮೆರೆದು ಪೊಲೀಸ್ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕಬ್ಬನ್ ಪಾರ್ಕ್​ ಠಾಣೆಯಲ್ಲಿ ಮೊದಲ ದಿನ ಕಳೆದಿದ್ದಾನೆ.

ಬೆಂಗಳೂರು : ಉದ್ಯಮಿ ಪುತ್ರನ ಮೇಲೆ ದರ್ಪ ಮೆರೆದು ಪೊಲೀಸ್ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕಬ್ಬನ್ ಪಾರ್ಕ್​ ಠಾಣೆಯಲ್ಲಿ ಮೊದಲ ದಿನ ಕಳೆದಿದ್ದಾನೆ. ಮೊಹಮ್ಮದ್ ನಲಪಾಡ್​ನನ್ನ ಕಬ್ಬನ್ ಪಾರ್ಕ್​ ಠಾಣೆಯಲ್ಲೇ ವಿಚಾರಣೆಗೆ ಒಳಪಡಿಸಲಾಯ್ತು.  ರಾತ್ರಿ 8ಕ್ಕೆ ಆರಂಭವಾದ ನಲಪಾಡ್​ ವಿಚಾರಣೆ 11.30ರವರೆಗೂ ನಡೆಯಿತು.

ವಿಚಾರಣೆ ವೇಳೆ ಘಟನೆ ನಡೆದಾಗ ಯಾರ್ಯಾರಿದ್ರು..?ಏನಕ್ಕೆ ಗಲಾಟೆ ನಡೀತು..?ವಿದ್ವತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ..?ಎಂಬಿತ್ಯಾದಿ ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ. ಆದರೆ ಆರೋಪಿ ನಲಪಾಡ್​ ಮಾತ್ರ ನಗುಮುಖದಿಂದಲೇ ಉತ್ತರ ನೀಡಿದ್ದಾನೆ ಎನ್ನಲಾಗುತ್ತಿದೆ.

ಅಲ್ಲದೆ, ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಅನ್ನೋ ಥರಾ ಹಾರಿಕೆ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ರಾತ್ರಿ 11.30ಕ್ಕೆ ವಿಚಾರಣೆ ಮುಕ್ತಾಯವಾಗುತ್ತಲೇ ನಲಪಾಡ್ ಪೊಲೀಸರಿಗೆ ತರಿಸಿದ್ದ ಊಟವನ್ನೇ ಸೇವಿಸಿದ್ದಾನೆ.

ಅನ್ನ, ಚಪಾತಿ, ಸಾರು ಊಟ ಮುಗಿಸಿ, ಸ್ಟೇಷನ್​ನಲ್ಲೇ ರಾತ್ರಿ ಕಳೆದಿದ್ದಾನೆ. ಇನ್ನೂ ಇಂದು ಕೂಡ ನಲಪಾಡ್ ವಿಚಾರಣೆ ನಡೆಯಲಿದ್ದು, ಘಟನೆ ನಡೆದ ಹೋಟೆಲ್​ಗೆ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ.

 

loader