ನಲಪಾಡ್’ಗೆ ಇಂದು ಸಿಗಲಿಲ್ಲ ಬೇಲ್; ಜೈಲೇ ಗತಿನಾ?

Nalapad did not get bail today also
Highlights

ವಿದ್ವತ್​ ಮೇಲೆ ನಲಪಾಡ್​ ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.  ಮುಂದಿನ ಅರ್ಜಿ ವಿಚಾರಣೆ ಸೋಮವಾರ 2. 30 ಕ್ಕೆ ನಡೆಯಲಿದೆ. 

ಬೆಂಗಳೂರು (ಮಾ. 09): ವಿದ್ವತ್​ ಮೇಲೆ ನಲಪಾಡ್​ ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.  ಮುಂದಿನ ಅರ್ಜಿ ವಿಚಾರಣೆ ಸೋಮವಾರ 2. 30 ಕ್ಕೆ ನಡೆಯಲಿದೆ. 

ವಿದ್ವತ್ ಪರ ವಕೀಲ ಶ್ಯಾಂ ಸುಂದರ್ ವಾದ ಮಂಡನೆ

ವೈದ್ಯಕೀಯ ರೀಪೋರ್ಟ್’ಗಳು ನಮಗೆ ಸಿಗದೇ ಆರೋಪಿ ಪರ ವಕೀಲರಿಗೆ ಹೇಗೆ ಸಿಕ್ಕಿವೆ?  ನಮಗೆ ಸಿಗದೇ, ಅವರಿಗೆ ಸಿಕ್ಕಿರೋದು ಆಶ್ಚರ್ಯ ತಂದಿದೆ. ಪರಿಣಾಮ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಒಡೆದು ಇಷ್ಟು ಪರಿಣಾಮಕಾರಿಯಾಗಿ ವಾದ ಮಾಡುತ್ತಿದ್ದಾರೆ.  ನಲಪಾಡ್ ಎಷ್ಟು ಪ್ರಭಾವಿ ಎಂಬುದು ಈ ಬೆಳವಣಿಗೆಗಳಿಂದಲೇ ಗೊತ್ತಾಗುತ್ತದೆ.  ಮಲ್ಯ ಆಸ್ಪತ್ರೆ ವೈದ್ಯ ಆನಂದ್ ವಿರುದ್ಧ ಈ ಕುರಿತು ತನಿಖೆಯಾಗಬೇಕು. ತನಿಖಾಧಿಕಾರಿಗಳಿಗೂ ಸಿಗದ ವೈದ್ಯಕೀಯ ದಾಖಲೆಗಳು ಆರೋಪಿ ಪರ ವಕೀಲರಿಗೆ ಹೇಗೆ ಸಿಕ್ಕಿತು?  ದಾಖಲಾತಿಗಳು ಲೀಕ್ ಆಗಿರುವುದು ನಲಪಾಡ್ ತನಿಖೆಯಲ್ಲಿ ಮೂಗು ತೂರಿಸುತ್ತಿರುವುದನ್ನು ತೋರಿಸುತ್ತದೆ  ಎಂದು ಎಸ್ ಶ್ಯಾಂಸುಂದರ್ ಹೇಳಿದ್ದಾರೆ. 

 
 

loader