ಜಿಲ್ಲಾಧಿಕಾರಿ ಪತ್ನಿಯೋರ್ವರು ಸಾಮಾನ್ಯ ಜನರಂತೆ ಕ್ಯೂ ನಲ್ಲಿ ನಿಂತು ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ನೈನಿತಾಲ್ [ಜು.20] : ಜಿಲ್ಲಾಧಿಕಾರಿ ಪತ್ನಿಯೋರ್ವರು ಸಾಮಾನ್ಯ ಜನರ ಜೊತೆಯಲ್ಲಿಯೇ ಸರತಿ ಸಾಲಿನಲ್ಲಿ ನಿಂತು ಮಗುವಿಗೆ ಚಿಕಿತ್ಸೆ ಪಡೆದಿದ್ದಾರೆ.
ನೈನಿತಾಲ್ ಜಿಲ್ಲಾಧಿಕಾರಿ ಸವೀನ್ ಬನ್ಸಾಲ್ ಪತ್ನಿ ಸುರಭಿ ಜನರ ಜೊತೆಗೆ ನಿಂತು ಸರದಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಪುಟ್ಟ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ತಮ್ಮ ಸರದಿ ಬರುವವರೆಗೂ ಕಾದು ನಿಂತಿದ್ದ ಸುರಭಿ ಆಸ್ಪತ್ರೆಯ ಡಿಸ್ಪೆನ್ಸರಿಯಲ್ಲಿ ಔಷಧಗಳನ್ನು ಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಜನರು ಎದುರಿಸುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಪತ್ನಿಯಾಗಿ ಸುರಭಿ ಕೂಡ ಎದುರಿಸಿದರು.
ಆದರೆ ಇಲ್ಲಿ ತೆರಳಿದ್ದ ವೇಳೆ ಜಿಲ್ಲಾಧಿಕಾರಿ ಪತ್ನಿಯನ್ನೂ ಯಾರೂ ಕೂಡ ಗುರುತಿಸಲಿಲ್ಲ. ಸಾಮಾನ್ಯರಂತೆ ತೆರಳಿ ಸಾಮಾನ್ಯರಂತೆ ಮರಳಿದ್ದು, ಇದೀಗ ಈ ಮಾಹಿತಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
