ನಾಗರಾಜ ಪೊಲೀಸರ ಮುಂದೆ ಶರಣಾಗಲು ಸಿದ್ಧರಿದ್ದಾರೆ. ಆದರೆ, ಪೊಲೀಸ್‌ ಮಾದರಿಯಲ್ಲಿ ವಿಚಾರಣೆ ನಡೆಸಬಾರದು. ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಸಬೇಕು. ತನ್ನ ಮೇಲಿನ ಪ್ರಕರಣಗಳಲ್ಲಿ ಮಕ್ಕಳ ಹೆಸರು ಸೇರಿಸಿ ತನ್ನನ್ನು ಕುಗ್ಗಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಹಾಗಾಗಿ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪ್ರಕರಣದಲ್ಲಿ ಮಕ್ಕಳಾದ ಗಾಂಧಿ, ಶಾಸ್ತ್ರೀ ಹೆಸರುಗಳನ್ನು ಕೈಬಿಡಬೇಕು. ಒಬ್ಬ ಆರೋಪಿಯನ್ನು ಹೇಗೆ ವಿಚಾರಣೆ ಮಾಡಬೇಕೆಂದು ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರು(ಮೇ.09): ಬ್ಲ್ಯಾಕ್‌ ಆ್ಯಂಡ್‌ ವೈಟ್‌' ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪಾಲಿಕೆ ಮಾಜಿ ಸದಸ್ಯ ವಿ. ನಾಗರಾಜನ ಪರ ವಕೀಲ ಶ್ರೀರಾಮರೆಡ್ಡಿ ಸೋಮವಾರ ಪ್ರಕರ ಣದ ತನಿಖಾಧಿ ಕಾರಿ ಎಸಿಪಿ ರವಿಕುಮಾರ್‌ ಅವರನ್ನು ಭೇಟಿಯಾಗಿ ಕೆಲವು ಷರತ್ತಿಗೆ ಒಪ್ಪಿದರೆ ನಾಗರಾಜ ಶರಣಾಗಲು ಸಿದ್ಧ ಎಂದು ಮನವಿ ಮಾಡಿದ್ದಾರೆ.
ನಾಗರಾಜ ಪೊಲೀಸರ ಮುಂದೆ ಶರಣಾಗಲು ಸಿದ್ಧರಿದ್ದಾರೆ. ಆದರೆ, ಪೊಲೀಸ್‌ ಮಾದರಿಯಲ್ಲಿ ವಿಚಾರಣೆ ನಡೆಸಬಾರದು. ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಸಬೇಕು. ತನ್ನ ಮೇಲಿನ ಪ್ರಕರಣಗಳಲ್ಲಿ ಮಕ್ಕಳ ಹೆಸರು ಸೇರಿಸಿ ತನ್ನನ್ನು ಕುಗ್ಗಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಹಾಗಾಗಿ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪ್ರಕರಣದಲ್ಲಿ ಮಕ್ಕಳಾದ ಗಾಂಧಿ, ಶಾಸ್ತ್ರೀ ಹೆಸರುಗಳನ್ನು ಕೈಬಿಡಬೇಕು. ಒಬ್ಬ ಆರೋಪಿಯನ್ನು ಹೇಗೆ ವಿಚಾರಣೆ ಮಾಡಬೇಕೆಂದು ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ನಿರ್ದೇಶನ ನೀಡಿದೆ. ಅದೇ ಮಾದರಿಯಲ್ಲೇ ವಿಚಾರಣೆ ನಡೆಸಬೇಕು. ಕೆಲವರ ಕುತಂತ್ರದಿಂದ ತನ್ನ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳಿಂದ ನನ್ನನ್ನು ಕೈಬಿಡಬೇಕು ಎಂದು ಕೆಲ ಷರತ್ತುಗಳನ್ನು ಆತ ನ್ಯಾಯಾಲಯದ ಮೂಲಕ ಕೇಳಿಕೊಂಡಿದ್ದಾರೆ. ಇದಕ್ಕೆ ಪೊಲೀಸರು ಸ್ಪಂದಿಸಬೇಕು ಎಂದು ಶ್ರೀರಾಮರೆಡ್ಡಿ ಅವರು ತನಿಖಾಧಿಕಾರಿ ಬಳಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತನಿಖಾಧಿಕಾರಿ ರವಿಕುಮಾರ್‌, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುತ್ತೇವೆ. ಈ ರೀತಿ ಷರತ್ತು ಹಾಕುವುದು ಸರಿಯಲ್ಲ ಎಂದು ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ. 
ಮತ್ತೊಬ್ಬಸಹಚರನ ಬಂಧನ:
ನಾಗರಾಜ್‌ನ ಮತ್ತೊಬ್ಬ ಸಹಚರ ಹಾಗೂ ಬೌನ್ಸರ್‌ ಹರಿಕೃಷ್ಣನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಹಿಂದೆ ಬಂಧನವಾಗಿದ್ದ ಶ್ರೀಹರಿಯ ಸಹೋದರನಾಗಿರುವ ಹರಿಕೃಷ್ಣ, ನಾಗರಾಜ್‌ಗೆ ಬೌನ್ಸರ್‌ ಆಗಿದ್ದ. ಈತ ಕೂಡ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ನಾಗರಾಜನಿಗೆ ಸಹಕರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 8 ಮಂದಿಯನ್ನು ಪೊಲೀಸರು ಬಂಧಿಸಿದ್ದು, ನಾಗರಾಜ ಮತ್ತು ಆತನ ಮಕ್ಕಳ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿದ್ದಾರೆ.