ರೈತರತ್ನ ನಾಗರಾಜ ಶೆಟ್ಟಿ
ವಿಭಾಗ - ಕೋಳಿ ಸಾಕಣಿಕೆ 
ಊರು: ಮಾಣಿ
ವಿಳಾಸ: ಸಾಗು ಮನೆ, ಮಾಣಿ ಗ್ರಾಮ, ಬಂಟ್ವಾಳ ತಾಲೂಕು, ದ.ಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯವಾಗಿ ಕೋಳಿ ಅಂಕ ಹೆಚ್ಚಾಗಿರುವ ಹಿನ್ನೆಲೆ ಕೋಳಿ ಅಂಕದ ಬಗ್ಗೆ ಆಸಕ್ತಿ ಹೊಂದಿರುವ ನಾಗರಾಜಶೆಟ್ಟರು ಕಳೆದ ಎಂಟು ವರ್ಷಗಳ ಹಿಂದೆ ವಿಶೇಷ ಕೋಳಿಯ ತಳಿಯನ್ನು ಕಂಡುಹಿಡಿದಿದ್ದು, ಸ್ವಂತ ಬ್ರೀಡ್ ತಯಾರಿ ಮಾಡಿದ್ದಾರೆ.

ಇದು ಮಾಣಿಯ ಕೋಳಿ ಬ್ರೀಡ್ ಎಂದು ಹೆಸರು ಹೊಂದಿದ್ದು, ಸ್ಥಳೀಯವಾಗಿ ಹೆಚ್ಚು ಪ್ರಸಿದ್ಧವಾಗಿದೆ. ರೈತ ಕುಟುಂಬದಿಂದ ಬಂದಿರುವ ನಾಗರಾಜಶೆಟ್ಟರು ಮೂರ್ನಾಲ್ಕು ಕೆಲಸಗಾರರೊಂದಿಗೆ ಕೋಳಿಸಾಕಣೆ ಮುಂದುವರಿಸಿದ್ದು, ಈ ಸಾಧನೆಗೆ ಮೆಚ್ಚುವಂತದ್ದಾಗಿದೆ.

ಸಾಧನೆಯ ವಿವರ

-20 ಎಕರೆ ಜಮೀನಿನಲ್ಲಿ 3.5 ಎಕರೆಯಷ್ಟು ಜಾಗದಲ್ಲಿ ಹುಂಜಕ್ಕಾಗಿಯೇ ಗೂಡು ನಿರ್ಮಾಣ. ಆ ಗೂಡಿನಲ್ಲಿ 300 ಹುಂಜಗಳು ವಾಸ ಮಾಡುತ್ತವೆ. ತಮಿಳುನಾಡಿನ ಈರೋಡ್‌ನಿಂದ ಹುಂಜವನ್ನು ತರಿಸಿ, ಸ್ಥಳೀಯ ಹೇಂಟೆಯೊಂದಿಗೆ ಬ್ರೀಡ್ ಮಾಡಿ ತಮ್ಮದೇ ಆದ ಮಾಣಿಯ ಕೋಳಿ ತಯಾರಿ ಮಾಡುತ್ತಾರೆ. ಕೋಳಿ ಫಾರ್ಮ್‌ನಲ್ಲಿ ಸಿಮೆಂಟ್ ಗೂಡು ಕಟ್ಟಿದ್ದು, ಕಬ್ಬಿಣದ ಮೆಶ್, ನಾಲ್ಕು ಬಾಗಿಲು ಮಾಡಲಾಗಿದೆ. ಹೇಂಟೆಗಳಿಗಾಗಿಯೇ ಪ್ರತ್ಯೇಕ ಜಾಗ  ಮಾಡಿಕೊಂಡಿರುವ ಇವರು ಮಾಂಸದ ಕೋಳಿಗಿಂತಲೂ ಅಂಕದ ಕೋಳಿಗೆ ಹೆಚ್ಚು ಗಮನಹರಿಸಿದ್ದಾರೆ. 4 ಕೆಲಸಗಾರರನ್ನು ಇವರು ಇಟ್ಟುಕೊಂಡಿದ್ದು, ಕೋಳಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಾರೆ.

ತಲೆ ಮೇಲೆ ಬುಟ್ಟಿ ಇಟ್ಟು ವ್ಯಾಪಾರ ಮಾಡ್ತಿದ್ದವರಿಗೆ ಈಗ 37 ಕಡೆ ಫಿಶ್ ಮಾರ್ಕೆಟ್

- 150ಕ್ಕೂ ಹೆಚ್ಚು ಹೇಂಟೆಗಳಿದ್ದು, ಅದರಲ್ಲಿ ತಿಂಗಳಿಗೆ 40-50 ಹೇಂಟೆಗಳು ಕಾವು ಕೊಡುತ್ತವೆ. ಹೇಂಟೆಗೆ, ಹುಂಜಕ್ಕೆ, ಸಂತಾನೋತ್ಪತ್ತಿ ಕಾರ್ಯಕ್ಕೆ ಕೋಳಿ ಮರಿಗಳ ಬೆಳವಣಿಗೆಗೆ 14 ಪ್ರತ್ಯೇಕ ಕೇಂದ್ರಗಳನ್ನು ಮಾಡಲಾಗಿದೆ. ಅದರಲ್ಲಿ 14ರಿಂದ 1 ಕೇಂದ್ರಕ್ಕೆ ಕೋಳಿ ಬಂತೆಂದರೆ ಮಾರಾಟಕ್ಕೆ ಸಿದ್ಧವಾಗಿದೆ ಎಂದರ್ಥ. ಹೇಂಟೆ ಮಾರಾಟಕ್ಕೆ ಸಿದ್ಧವಾಗಲು 20 ತಿಂಗಳು ಬೇಕು. ಒಂದು ಹುಂಜ ಗರಿಷ್ಠ 10,000 ರು. ಗಳವರೆಗೂ ಮಾರಾಟ, ಪ್ರತಿ ತಿಂಗಳೂ ಸುಮಾರು 30 ಜೂಜಿನ ಹುಂಜಗಳ ಮಾರಾಟ.
- ಕೋಳಿಸಾಕಣೆಯಿಂದ ತಿಂಗಳಿಗೆ 1 ರಿಂದ 2 ಲಕ್ಷ ಆದಾಯ 
- ಒಂದು ಹುಂಜದಿಂದ ಮೂರು ಹೇಂಟೆಗಳಿಗೆ ಬ್ರೀಡ್ ಮಾಡಲಾಗುತ್ತದೆ.

ಗಮನಾರ್ಹ ಅಂಶ

ಒಂದು ಸಣ್ಣ ಹಳ್ಳಿಯಲ್ಲಿ ಕೋಳಿಗಳ ಮೂಲಕವೇ ಹೇಗೆ ಬದುಕು ನಿರ್ಮಿಸಿಕೊಳ್ಳಬಹುದೆಂದು ತೋರಿಸಿಕೊಟ್ಟ ಇವರು ಸ್ಥಳೀಯವಾಗಿ ಪ್ರಸಿದ್ಧವಾದ ಕೋಳಿ ಕಾಳಗಕ್ಕೆ ವಿಶೇಷವಾದ ತಳಿಯನ್ನೇ ಸೃಷ್ಟಿಮಾಡಿ ವ್ಯಾಪಾರ ಮಾಡುತ್ತಿರುವುದು ಗಮನಾರ್ಹ.