ಜನಶಕ್ತಿ ವೇದಿಕೆ ಸಂಘಟನೆಯ ಕಾರ್ಯಕರ್ತರು ಇಲ್ಲಿನ ಅಂಧ ಮಕ್ಕಳಿಗೆ ಹಾಲು ಕೊಟ್ಟು ಹಬ್ಬ ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.
ಕಾರವಾರ(ಜು.27): ನಾಗರಪಂಚಮಿಯ ಹಬ್ಬದ ದಿನದಂದು ನಾಗ ದೇವಾಲಯಕ್ಕೆ ಹೋಗಿ ಕಲ್ಲು ನಾಗರಿಗೆ ಹಾಲೆರೆದು ಹಬ್ಬ ಆಚರಣೆ ಮಾಡುವುದು ಸಾಮಾನ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಜನಶಕ್ತಿ ವೇದಿಕೆ ಸಂಘಟನೆಯ ಕಾರ್ಯಕರ್ತರು ಇಲ್ಲಿನ ಅಂಧ ಮಕ್ಕಳಿಗೆ ಹಾಲು ಕೊಟ್ಟು ಹಬ್ಬ ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.
ದಿಟ ನಾಗರ ಕಂಡರೆ ಹೊಡೆ ಕಲ್ಲು ನಾಗರ ಕಂಡರೆ ಪೂಜೆ ಮಾಡು ಎನ್ನುವ ಗಾದೆ ಮಾತೆ ಇದೆ. ಇಂದು ಕಲ್ಲು ನಾಗರಿಗೆ ಹಾಲು ಎರೆದು ಪೂಜೆ ಮಾಡುವ ಬದಲು ಸಂಘಟನೆಯ ಕಾರ್ಯಕರ್ತರು ಕಾರವಾರದ ಆಶಾ ನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ಮಕ್ಕಳಿಗೆ ಹಾಲು ಹಾಲು ನೀಡಿ ವಿಭಿನ್ನವಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಹಾಲು ಕುಡಿದ ಅಂಧ ಮಕ್ಕಳು ಖುಷಿ ಪಟ್ಟರು.
