ಮಲ್ಯ ಆಸ್ಪತ್ರೆಗೆ ಶಾಸಕ ಹ್ಯಾರಿಸ್ ಧೀಡಿರ್ ಭೇಟಿ!

First Published 10, Mar 2018, 9:48 PM IST
NA Harris Visits Mally Hospital
Highlights

ಮುಹಮ್ಮದ್ ನಲಪಾಡ್’ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿದ್ವತ್ ಡಿಸ್ಚಾರ್ಚ್ ಆದರೂ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್   ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಬೆಂಗಳೂರು: ಮುಹಮ್ಮದ್ ನಲಪಾಡ್’ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿದ್ವತ್ ಡಿಸ್ಚಾರ್ಚ್ ಆದರೂ, ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್   ಇಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ.

ಮಗನಿಗೆ ಜಾಮೀನು ಕೊಡಿಸಲು ಕಸರತ್ತು ನಡೆಸುತ್ತಿರುವ ಎನ್.ಎ.ಹ್ಯಾರಿಸ್, ವೈದ್ಯರ ಮೇಲೆ ಮತ್ತೆ ಒತ್ತಡ ಹೇರಲು ಹೋಗಿದ್ದರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಮಲ್ಯ ಆಸ್ಪತ್ರೆ ವೈದ್ಯ ಡಾ.ಆನಂದ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.  ಇದೇ ಬೆಳವಣಿಗೆಗಳ ಬೆನ್ನಲ್ಲೇ ಆಸ್ಪತ್ರೆಗೆ ಹ್ಯಾರಿಸ್ ಭೇಟಿ ಕುರಿತು ಚರ್ಚೆ ನಡೆಸಿರುವ ಸಾಧ್ಯತೆಗಳಿವೆ.

ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಸುಮಾರು 15 ನಿಮಿಷ ಮಲ್ಯ ಆಸ್ಪತ್ರೆಯೊಳಗಿದ್ದು ನಿರ್ಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಯಿಸದೆ ಶಾಸಕ ಹ್ಯಾರಿಸ್ ತೆರಳಿದ್ದಾರೆ.

18 ದಿನಗಳಿಂದ ಸೆಂಟ್ರಲ್ ಜೈಲು ಸೇರಿರುವ ಹ್ಯಾರಿಸ್ ಪುತ್ರ ನಲಪಾಡ್ ಮುಹಮ್ಮದ್’ಗೆ ಹೈಕೋರ್ಟ್ ನಿಂದ ಜಾಮೀನು ಪಡೆಯಲು ಹ್ಯಾರಿಸ್ ಪ್ರಯತ್ನ ನಡೆಸುತ್ತಿದ್ದಾರೆ.

loader