29 ಬಾರಿ ಪ್ರಧಾನಿ ಭೇಟಿ ಮಾಡಲು ತೆರಳಿದರೂ ಪ್ರಯೋಜನವಾಗಿಲ್ಲ : ಚಂದ್ರಬಾಬು ನಾಯ್ಡು

First Published 8, Mar 2018, 12:11 PM IST
N Chandrababu Naidu Slams PM Modi
Highlights

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಅಮರಾವತಿ : ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.  ಕಾಂಗ್ರೆಸ್ ಯಶಸ್ವಿಯಾಗಿ  ತೆಲಂಗಾಣ ಎಂಬ ಮಗುವನ್ನು ಹೆತ್ತಿತು. ಆದರೆ ತಾಯಿಯನ್ನೇ ಕೊಂದಿತು ಎಂದಿರುವ ಮಾತನ್ನು ಪ್ರಸ್ತಾಪ ಮಾಡಿದರು. ಕೇಂದ್ರ ಆಂಧ್ರ ಪ್ರದೇಶಕ್ಕೆ ಸೂಕ್ತ ಹಣವನ್ನು ಬಿಡುಗಡೆ ಮಾಡುವಲ್ಲಿ  ಹಿಂದೇಟು ಹಾಕಿದೆ ಎಂದರು.

ತಾವು ದಿಲ್ಲಿಗೆ 29 ಬಾರಿ  ಭೇಟಿ ನೀಡಿ ಆಂಧ್ರ ಪ್ರದೇಶದ ಬಗ್ಗೆ ಪ್ರಸ್ತಾಪ ಮಾಡಲು ಯತ್ನಿಸಿದ್ದೆ. ಆದರೆ ಇದರಿಂದ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಎಲ್ಲಾ ಯೋಜನೆಗಳಿಗೂ ಭರವಸೆಯನ್ನಷ್ಟೇ ನೀಡಿದ ಕೇಂದ್ರ ಸರ್ಕಾರ ಅವನ್ನು ಈಡೇರಿಸುವಲ್ಲಿ ಮಾತ್ರ ಹಿಂದೇಟು ಹಾಕಿದೆ. 

ಯಾವುದೇ ಭರವಸೆಯೂ ಕೂಡ ಈಡೇರಿಲ್ಲ ಎಂದು ಚಂದ್ರಬಾಬು ನಾಯ್ಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಂಧ್ರ ಪ್ರದೇಶಕ್ಕೆ 19 ರೀತಿಯಾದ ಭರವಸೆಗಳನ್ನು ನೀಡಿದ್ದ ಕೇಂದ್ರ ಸರ್ಕಾರ ಯಾವ ಭರವಸೆಯನ್ನೂ  ಕೂಡ ಈಡೇರಿಸಿಲ್ಲ ಎಂದು ಹೇಳಿದ್ದಾರೆ.

loader