ಮೈಸೂರು: ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ದಯಾನಂದ ಮಾನೆ ಮಾರ್ಗದರ್ಶನ ದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಕುರಿತು ಕೆಆರ್‌ಎಸ್‌ನ ಕಾರ್ತಿಕ್ ಎಂಬ ವಿದ್ಯಾರ್ಥಿಯೊಬ್ಬರು ಸಂಶೋಧನೆ ಮಾಡುತ್ತಿದ್ದಾರೆ. 

ಸಂಶೋಧನಾ ವರದಿ ಸಿದ್ಧವಾಗಿದ್ದು, ಕುಮಾರಸ್ವಾಮಿ ಪ್ರತಿನಿಧಿಸಿದ್ದ ಕ್ಷೇತ್ರದ ಮತದಾರರ ಸಂದರ್ಶನ ಮತ್ತು ಕುಮಾರಸ್ವಾಮಿ ಅವರ ಸಂದರ್ಶನ ಮಾತ್ರ ಬಾಕಿ ಉಳಿದಿದೆ. ಅಂತೆಯೇ ಹೊಳೆ ನರಸೀಪುರದ ವೀಣಾ ಎಂಬುವರು ಎಚ್.ಡಿ. ದೇವೇಗೌಡರ ಆಡಳಿತ ಅವಧಿಯಲ್ಲಿ ಕರ್ನಾ ಟಕಕ್ಕೆ ನೀಡಿದ ಕೊಡುಗೆ ಕುರಿತು ಪಿಎಚ್‌ಡಿ ಮಾಡುತ್ತಿದ್ದಾರೆ.