ಮೈಸೂರು ರಾಜವಂಶಸ್ಥರಲ್ಲಿ ಇದೀಗ ಸಂತಸ ಮೂಡಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಮಕ್ಕಳಾಗುವ ಸಂದರ್ಭ ಕೂಡಿ ಬಂದಿದೆ.

ಮೈಸೂರು: ಮೈಸೂರು ರಾಜವಂಶಸ್ಥರಲ್ಲಿ ಇದೀಗ ಸಂತಸ ಮೂಡಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಮಕ್ಕಳಾಗುವ ಸಂದರ್ಭ ಕೂಡಿ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯದುವೀರ ಅವರು ಪ್ರಮೋದಾದೇವಿ ಒಡೆಯರ್‌ ಅವರ ದತ್ತುಪುತ್ರ. ಅವರ ಪತ್ನಿ ತ್ರಿಷಿಕಾ ಗರ್ಭ ಧರಿಸಿರುವುದು ಕುಟುಂಬದಲ್ಲಿ ಸಂತಸ ಮೂಡಿಸಿದೆ.

ಜನಪದ ಕಥೆಯೊಂದರ ಪ್ರಕಾರ, ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನ ಶಾಪದಿಂದಾಗಿ ಒಡೆಯರ್‌ ವಂಶದ ಅರಸರಿಗೆ ಮಕ್ಕಳಾಗುತ್ತಿರಲಿಲ್ಲ ಎಂಬ ಪ್ರತೀತಿ ಇದೆ. ಈಗ ಕುಟುಂಬದವರು ಮಕ್ಕಳ ಭಾಗ್ಯ ಕಾಣುವಂತಾಗಿದೆ.

ತ್ರಿಷಿಕಾ ಕುಮಾರಿ ಈಗ 4 ತಿಂಗಳ ಗರ್ಭಿಣಿಯಾಗಿದ್ದು ದಸರಾ ವೇಳೆಗೆ ಅರಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.