ಮೈಸೂರು : ಮೈಸೂರಿನ ಪೊಲೀಸ್ ಓರ್ವರು ಬರೆದ  ಲೆಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಡೂಟ ತಿನ್ನಲು ರಜೆ ಬೇಕೆಂದು ಕೇಳಿ ನಜರಬಾದ್ ಠಾಣೆ ಎಎಸ್ ಐ ಮಂಜುನಾಥ್ ಪತ್ರ ಬರೆದಿದ್ದು, ತಿಂಗಳಿನಿಂದ ಕೆಲಸ ಮಾಡಿ ಆಯಾಸವಾಗಿದೆ. ಮಧುಮೇಹ, ಬಿಪಿ ಇದ್ದು ವಿಶ್ರಾಂತಿ ಪಡೆದುಕೊಳ್ಳಬೇಕಿದೆ ಎಂದು ದೇವರಾಜ ಉಪವಿಭಾಗ ಸಹಾಯಕ ಆಯುಕ್ತರಿಗೆ ಪತ್ರದ ಮೂಲಕ‌ ಮನವಿ ಮಾಡಿದ್ದಾರೆ. 

ಮೈಸೂರಿನ ನಜರಬಾದ್ ಎಎಸ್ಐ ಮಂಜುನಾಥ.ಪಿ ಸಹಿ ಇರುವ ರಜೆ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಇಲಾಖೆಯಲ್ಲಿ ಈ ರೀತಿಯಾಗಿ ರಜೆ ಕೇಳಿದ ಪತ್ರ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಪೇದೆಯೋರ್ವರು ಬರೆದ ಪತ್ರವೂ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇದೀಗ ಮೈಸೂರು ಪೊಲೀಸ್ ಪತ್ರದ ವಿಚಾರ ಸದ್ದು ಮಾಡಿದೆ.