ಹಾಸನ ಡಿಸಿಯಾಗಿ ಮುಂದುವರೆದ ರೋಹಿಣಿ; ವರ್ಗಾವಣೆಯಾದರೂ ಅತಂತ್ರ ಸ್ಥಿತಿಯಲ್ಲಿರುವ ಡಿ. ರಂದೀಪ್

First Published 15, Mar 2018, 12:39 PM IST
Mysuru DC D Randeep Transfer to Hassana
Highlights

ಚುನಾವಣಾ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತದಲ್ಲಿ ರಿ ಶಫಲ್ ಮಾಡಲಾಗಿದೆ.  ಹಾಸನ ಡಿಸಿಯಾಗಿ  ವರ್ಗಾವಣೆ ಹೊಂದಿರುವ ಡಿ.ರಂದೀಪ್ ಸ್ಥಿತಿ ಅತಂತ್ರವಾಗಿದೆ. 

ಬೆಂಗಳೂರು (ಮಾ. 15): ಚುನಾವಣಾ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾಡಳಿತದಲ್ಲಿ ರಿ ಶಫಲ್ ಮಾಡಲಾಗಿದೆ.  ಹಾಸನ ಡಿಸಿಯಾಗಿ  ವರ್ಗಾವಣೆ ಹೊಂದಿರುವ ಡಿ.ರಂದೀಪ್ ಸ್ಥಿತಿ ಅತಂತ್ರವಾಗಿದೆ. 

ಸರ್ಕಾರದಿಂದ ಎಲ್ಲಿಯೂ ಸ್ಥಳ ನಿಯೋಜನೆ ಮಾಡದ ಹಿನ್ನಲೆಯಲ್ಲಿ ಡಿ. ರಂದೀಪ್ ಮೈಸೂರಿನಲ್ಲಿಯೇ ಉಳಿದಿದ್ದಾರೆ.  ರೋಹಿಣಿ ಸಿಂಧೂರಿ ವರ್ಗಾವಣೆಗೆ ತಡೆ ತಂದ ಹಿನ್ನಲೆಯಲ್ಲಿ  ಹಾಸನಕ್ಕೆ ವರ್ಗಾವಣೆಯಾಗಿದ್ದ ಡಿ.ರಂದೀಪ್ ಮೈಸೂರಿನಲ್ಲಿಯೇ ಉಳಿಯಬೇಕಾಯಿತು.  ಹಾಸನದಲ್ಲಿ ರೋಹಿಣಿ ಮುಂದುವರೆದಿದ್ದಾರೆ.  ಮೈಸೂರಿನಲ್ಲಿ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಂದೀಪ್’ಗೆ ಸ್ಥಳ ನಿಯುಕ್ತಿಗೊಳಿಸದ ಪರಿಣಾಮ, ಜಿಲ್ಲಾಧಿಕಾರಿ ನಿವಾಸದಲ್ಲೇ ಉಳಿದಿದ್ದಾರೆ. 

ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ  ಅಂತಿಮ ತೀರ್ಪು ಬರುವವರೆಗೂ ಮೈಸೂರಿನಲ್ಲಿ ಮುಂದುವರೆಸುವಂತೆ ರಂದೀಪ್ ಕೇಳಿದ್ದರು.  ರಂದೀಪ್ ಮನವಿಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ  ಆದೇಶಕ್ಕಾಗಿ ಕಾಯುತ್ತಿದ್ದಾರೆ. 

loader