ಯದುವೀರ್ ಒಡೆಯರ್ ಕುಟುಂಬ ಸಮೇತರಾಗಿ ಈ ಬಾರಿ ಅಂಬಾರಿ ಹೊರಲಿರುವ ಅರ್ಜುನನ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಪುಟಾಣಿ ರಾಜಕುಮಾರ ಆದ್ಯವೀರ್ ಅವರೂ ಕೂಡ ಜೊತೆಗಿದ್ದುದು ವಿಶೇಷ. 

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಇನ್ನೊಂದು ವಿಶೇಷವೆಂದರೆ ಈ ಬಾರಿ ದಸರೆಯಲ್ಲಿ ಪಾಲ್ಗೊಳ್ಳಲು ಮೈಸೂರಿನ ರಾಜಮನೆತನದಲ್ಲಿ ಮತ್ತೊಂದು ಕುಡಿ ಆಗಮನವಾಗಿದೆ. 

ಇನ್ನು ಆನೆಗಳು ದಸರೆಗಾಗಿ ಸಿದ್ಧವಾಗುತ್ತಿದ್ದು ಶನಿವಾರ ರಾಜ ಯದುವೀರ್ ಒಡೆಯರ್, ರಾಣಿ ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ಜೊತೆ ಆಗಮಿಸಿ ಅಂಬಾರಿ ಹೊರುವ ಅರ್ಜುನನ ಕ್ಷೇಮ ವಿಚಾರಿಸಿದ್ದಾರೆ.

ಅಕ್ಟೋಬರ್ 10 ರಿಂದ ಮೈಸೂರಿನಲ್ಲಿ ಅದ್ದೂರಿ ದಸರಾ ಮಹೋತ್ಸವ ಆರಂಭವಾಗಲಿದ್ದು, 19ರವರೆಗೆ ನಡೆಯಲಿದೆ.