ಅದಲ್ಲದೆ ಕಳೆದ ವರ್ಷದ ಡಿಸೆಂಬರ್ 28ರಂದು ಮೃಗಾಲಯದ 6 ಪಕ್ಷಿಗಳು ಸಾವನಪ್ಪಿದ್ದವು.

ಮೈಸೂರು(ಫೆ.03): ಹಕ್ಕಿ ಜ್ವರ ಕಂಡುಬಂದ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಇಂದಿನಿಂದ ಮತ್ತೆ ಆರಂಭವಾಗಿದೆ. ಪಕ್ಷಿಗಳಿಗೆ ಮಾರಕ ಹೆಚ್ 5, ಎನ್ 8 ವೈರಾಣು ಮೃಗಾಲಯದಲ್ಲಿರುವ ಹಕ್ಕಿಗಳಲ್ಲಿ ಕಾಣಿಸಿಕೊಂಡಿತ್ತು. ಅದಲ್ಲದೆ ಕಳೆದ ವರ್ಷದ ಡಿಸೆಂಬರ್ 28ರಂದು ಮೃಗಾಲಯದ 6 ಪಕ್ಷಿಗಳು ಸಾವನಪ್ಪಿದ್ದವು. ಕೇಂದ್ರ ಮೃಗಾಲಯ ಪ್ರಾಧಿಕಾರದ ಆದೇಶದ ಮೇರೆಗೆ ಒಂದು ತಿಂಗಳು ಪ್ರವಾಸಿಗರನ್ನು ನಿಷೇಧಿಸಲಾಗಿತ್ತು.

ಹಕ್ಕಿಗಳ ರಕ್ತ ಮತ್ತು ಮಲದ ಮಾದರಿಗಳನ್ನು ಭೋಪಾಲ್'ನಲ್ಲಿರುವ ಪ್ರಯೋಗಲಾಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಕಳುಹಿಸಿದ ಎರಡೂ ಮಾದರಿಗಳು ನೆಗೆಟಿವ್ ಆಗಿದ್ದ ಕಾರಣ ಇಂದಿನಿಂದ ಮೃಗಾಲಯಕ್ಕೆ ಪ್ರವಾಸಿಗರನ್ನು ತೆರಳಲು ಅನುಮತಿ ನೀಡಲಾಗಿದ್ದು, ಬರುವ ಪ್ರವಾಸಿಗರಿಗೆ ಸಿಹಿ ವಿತರಿಸಲಾಗುತ್ತಿದೆ.ಚಾಮರಾಜೇಂದ್ರ ಮೃಗಾಲಯದಲ್ಲಿ 836 ಪಕ್ಷಿಗಳು ಹಾಗೂ 1470 ಪ್ರಾಣಿಗಳಿವೆ.