ಹುಡುಗಿಯ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಧೀಶರು ಮಸಾಜ್ ಸೆಂಟರ್ ಮಾಲೀಕ ರಾಜೇಶ್​'ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.

ಮೈಸೂರು(ಡಿ.22): ಸೆಕ್ಸ್ ಸ್ಕ್ಯಾಂಡಲ್'ನಲ್ಲಿ ಸಿಕ್ಕಿಬಿದ್ದ ಯುವತಿಯು ನಟರಾದ ಮಂಡ್ಯ ರಮೇಶ್ ಹಾಗೂ ಸಾಧು ಕೊಕಿಲಾ ಜೊತೆ ಮೂವರು ಪೊಲೀಸ್ ಅಧಿಕಾರಗಳ ವಿರುದ್ಧವೂ ಆರೋಪ ಮಾಡಿದ್ದಾಳೆ.

ನ್ಯಾಯಾಧೀಶರ ಮುಂದೆ ಕಣ್ಣೀರಿಡುತ್ತಾ ಹೇಳಿಕೆ ನೀಡಿದ ಯುವತಿ ನಟರ ಜೊತೆ ಅಧಿಕಾರಿಗಳು ಸಹ ತೊಂದರೆ ನೀಡುತ್ತಿದ್ದಳು ಎಂದು ಹೇಳಿಕೆ ನೀಡಿದ್ದಾಳೆ. ಹುಡುಗಿಯ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಧೀಶರು ಮಸಾಜ್ ಸೆಂಟರ್ ಮಾಲೀಕ ರಾಜೇಶ್​'ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.

ಮಂಡ್ಯ ರಮೇಶ್ ನಿರಾಕರಣೆ

ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ ಮಂಡ್ಯ ರಮೇಶ್, ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಮಗೂ ಈ ಕೇಸ್'ಗೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಈ ಅಪಾದನೆ ನನಗೆ ನೋವುಂಟು ಮಾಡಿದೆ. ನನ್ನ ಜವಾಬ್ದಾರಿ ಕೆಲಸ ಏನು ಎನ್ನುವ ಬಗ್ಗೆ ನನಗೆ ಅರಿವಿದೆ. ಉದ್ಘಾಟನೆ ಆದ ಮೇಲೆ ಆ ಪಾರ್ಲರ್'ಗೆ ನಾನು ಒಂದೇ ಬಾರಿ ಹೋಗಿದ್ದೆ. ಆರೋಪ ಮಾಡುತ್ತಿರುವ ಹುಡುಗಿಯ ಪರಿಚಯವೂ ಕೂಡ ನನಗೆ ಇಲ್ಲ. ಎಲ್ಲರೊಂದಿಗೂ ಕೂಡ ನಾನು ಅತ್ಯಂತ ಸ್ನೇಹದಿಂದ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಾರೆ. ಆದರೆ ಆ ಹುಡುಗಿ ಆರೋಪ ಮಾಡುತ್ತಿರುವುದು ಸುಳ್ಳು, ಇದರ ಹಿಂದೆ ಯಾವುದೇ ರೀತಿಯಾದ ಒತ್ತಡ ಇರಬಹುದು ಎಂದು ಹೇಳಿದ್ದಾರೆ.

ಒಡನಾಡಿ ಸಂಸ್ಥೆಯೊಂದಿಗೆ ನನಗೆ ಉತ್ತಮ ಬಾಂಧವ್ಯವಿದೆ. ಸ್ಪಾ ಓನರ್ ರಾಜೇಶ್ ಮತ್ತು ಹುಡುಗಿಯ ನಡುವಿನ ವೈಮನಸ್ಸಿನಿಂದ ಈ ಆರೋಪ ಮಾಡಿರಬಹುದು ಎಂದಿದ್ದಾರೆ.