ವಿಜಯದಶಮಿ ದಿನದಂದೇ ಮೈಸೂರು ಅರಮನೆಯಲ್ಲಿ 2 ಸಾವು ಸಂಭವಿಸಿದೆ. 108 ವರ್ಷಗಳ ಬಳಿಕ ಈ ರೀತಿ ದಶಮಿ ದಿನ ಸೂತಕ ಆವರಿಸಿದೆ.
ಬೆಂಗಳೂರು : ನವರಾತ್ರಿಯ 10 ನೇ ದಿನದಂದು ವಿಶಾಲಾಕ್ಷಿ ಮೃತಪಟ್ಟಿದ್ದಾರೆ. 1910 ರ ಬಳಿಕ ವಿಜಯ ದಶಮಿ ದಿನ ಸಾವಾಗಿರುವುದು ಇದೇ ಮೊದಲು. ವಿಜಯದಶಮಿ ದಿನ ಹೆಣ್ಣುಮಗಳ ಸಾವಾಗಿರುವುದು ಕೇಳಿಲ್ಲ.
ಇಂದು ವಿಜಯದಶಮಿ ಪ್ರಯುಕ್ತ ವಿಜಯ ಯಾತ್ರೆ ನಡೆಯ ಬೇಕಿತ್ತಾದರೂ ರದ್ದುಪಡಿಸಲಾಗಿದೆ. ಇದಕ್ಕೆ ಪರಿಹಾರ ಏನು ಎಂಬುದನ್ನು ಹುಡುಕಬೇಕು.
ಮುಂದೆ ರಾಜಮನೆತನದವರಿಗೆ ಏನು ಸಮಸ್ಯೆ ಆಗುತ್ತದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಜ್ಯೋತಿಷಿಗಳನ್ನು ಕೇಳಬೇಕು ಎಂದು ಇಂದ್ರಾಕ್ಷಿದೇವಿ ಪುತ್ರ ರಾಜಚಂದ್ರ ಹೇಳಿದರು.
