Asianet Suvarna News Asianet Suvarna News

ವಿಶ್ವ ವಿಖ್ಯಾತ ಅರಮನೆಯ ಬೆಚ್ಚಿ ಬೀಳಿಸುವ ಸ್ಟೋರಿ: ಇಡೀ ಕರುನಾಡಿನ ಮಂದಿಯನ್ನು ದಂಗುಗೊಳಿಸಲಿದೆ ಈ ಸತ್ಯ

ನಾಡಹಬ್ಬ ದಸರಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಇವತ್ತು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ . ಈ ಮಧ್ಯೆ ವಿಶ್ವ ವಿಖ್ಯಾತ ಅರಮನೆಯ ಬೆಚ್ಚಿ  ಬೀಳಿಸುವ ಸ್ಟೋರಿಯೊಂದು ಬೆಳಕಿಗೆ ಬಿದ್ದಿದೆ. ಇದನ್ನ  ಕೇಳಿದ್ರೆ ನೀವೂ ದಂಗಾಗಿ ಬಿಡ್ತೀರಿ. ಏನದು ಅಂತೀರಾ? ಇಲ್ಲಿದೆ ವಿವರ

Mysore palace damage

ಮೈಸೂರು(ಸೆ.29): ಮೈಸೂರು ದಸರಾ ವಿಶ್ವ ಪ್ರಸಿದ್ದ.. ಅದರಲ್ಲೂ ಮೈಸೂರು ಅರಮನೆ ಇನ್ನೂ ಫೇಮಸ್. ಜೀವನದಲ್ಲಿ ಒಮ್ಮೆ ಮೈಸೂರು ಅರಮನೆ ನೋಡಲೇಬೇಕು ಎಂದು ಕನಸುಕಟ್ಟಿಕೊಂಡವರು ಅದೆಷ್ಟೋ ಮಂದಿ ಇದ್ದಾರೆ ಇಂಹಥ ಐತಿಹಾಸಿಕ ಜಗತ್ಪ್ರಸಿದ್ಧ ಅರಮನೆ ಸೋರುತಿದೆ. ಇದು ನಿಮಗೆ ಆಶ್ಚರ್ಯ ಎನ್ನಿಸಿದ್ರೂ ಸತ್ಯ ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ..

Mysore palace damage

ಈ ಸತ್ಯ ಬಯಲಿಗೆ ಬಂದಿದ್ದು ಕಳೆದ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ. ಅರಮನೆಯ ದರ್ಬಾರ್​ ಹಾಲ್​ ಮತ್ತು ಕಲ್ಯಾಣ ಮಂಟಪ ಎರಡೂ ಕಡೆ ಮೇಲ್ಚಾವಣಿಯಿಂದ ನೀರು ಕೆಳಕ್ಕೆ ಜಿನುಗುತ್ತಿತ್ತು. ಕೆಳಗೆ ಹಾಕಿದ್ದ ಮ್ಯಾಟ್​​ಗಳೆಲ್ಲಾ ತೋಯ್ದು ಹೋಗಿದ್ದವು. ಪಾರಂಪರಿಕ ಕಟ್ಟಡ ಸೋರುವುದನ್ನು ಅರಮನೆ ಮಂಡಳಿ ಕೂಡ ಒಪ್ಪಿಕೊಂಡಿದೆ. ಯಾಕೆ ದುರಸ್ತಿ ಮಾಡಿಸಿಲ್ಲ ಕೇಳಿದರೆ, ದುರಸ್ಥಿ ಮಾಡೋರೆ ಸಿಗುತ್ತಿಲ್ಲ ಎಂದಿದ್ದಾರೆ.

Mysore palace damage

ಇದನ್ನ ದುರಸ್ಥಿ ಮಾಡೋರೇ ಸಿಗ್ತಿಲ್ವಂತೆ. ಇದನ್ನು ಬೇಜವಾಬ್ದಾರಿ ಎಂದರೆ ತಪ್ಪಾಗುವುದಿಲ್ಲ. ಇನ್ನೂ ಎಲ್ಲೋ ಕೆಲ ಕಡೆ ಸೋರುತ್ತಿದೆ ಹೇಳುತ್ತಿದ್ದಾರೆ. ಆದರೆ ಹೆಚ್ಚು ಕಡಿಮೆ ಅರಮನೇ ಮೇಲ್ಛಾವಣಿಯ ಬಹುತೇಕ ಭಾಗವನ್ನ ಟಾರ್ಪಲ್'​ನಿಂದ ಮುಚ್ಚಿರುವುದನ್ನು ನೋಡಿದರೆ ಎಷ್ಟು ಸೋರುತ್ತೆ ಅನ್ನೋದು ಅರ್ಥವಾಗುತ್ತದೆ. ಇನ್ನೂ ದುರಸ್ಥಿ ಕಾರ್ಯಕ್ಕೆ ಸಮಿತಿ ರಚಿಸಿ ಸೂಕ್ತ ತಂತ್ರಜ್ಞರನ್ನ ಹುಡುಕುತ್ತಿದ್ದಾರಂತೆ. ಇವರಿಗೆ ಆ ತಂತ್ರಜ್ಞರು ಸಿಗೋದ್ಯಾವಾಗಾ, ದುರಸ್ಥಿ ಕಾರ್ಯ ನಡೆಯೋದ್ಯಾವಾಗಾ ಅಧಿಕಾರಿಗಳೇ ಉತ್ತರಿಸಬೇಕಿದೆ.

Latest Videos
Follow Us:
Download App:
  • android
  • ios