ಆಂಧ್ರ ಮೂಲದ ದಿಲೀಪ್ ಕನ್ಸ್ಟ್ರಕ್ಷನ್ ಕಂಪೆನಿಯಿಂದ ಕಾಮಗಾರಿ ನಡೆದಿತ್ತು. 419 ಕೋಟಿ ರೂ ವೆಚ್ಚದಲ್ಲಿ ನಂಜನಗೂಡಿನ ಚತುಷ್ಪದ ರಸ್ತೆ ನಿರ್ಮಿಸಲಾಗಿತ್ತು.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಬಹುಕೋಟಿ ಮೊತ್ತದ ಚತುಷ್ಪತ ಹೈವೆ ರಸ್ತೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 766 ನಂಜನಗೂಡು ಕೋರ್ಟ್ ಮುಂಭಾಗ ಸುಮಾರು 300 ಅಡಿ ಉದ್ದ ರಸ್ತೆ ಕುಸಿದಿದ್ದರಿಂದ ಜನ ಆತಂಕದಲ್ಲಿ ಓಡಾಡುವಂತಾಗಿದೆ. ಇತ್ತೀಚೆಗೆ ಮೈಸೂರಿನ ಟಿ.ನರಸೀಪುರದಲ್ಲೂ ರಸ್ತೆ ಕುಸಿದಿತ್ತು. ಕಾಮಗಾರಿ ಆರಂಭವಾಗಿ ವರ್ಷ ಕಳೆಯುವುದರೊಳಗೆ ರಸ್ತೆ ಅದೋಗತಿಗೆ ಇಳಿದಿದೆ.
ಆಂಧ್ರ ಮೂಲದ ದಿಲೀಪ್ ಕನ್ಸ್ಟ್ರಕ್ಷನ್ ಕಂಪೆನಿಯಿಂದ ಕಾಮಗಾರಿ ನಡೆದಿತ್ತು. 419 ಕೋಟಿ ರೂ ವೆಚ್ಚದಲ್ಲಿ ನಂಜನಗೂಡಿನ ಚತುಷ್ಪದ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಕಾಮಗಾರಿ ಕಳಪೆ ಎಂದು ಪ್ರತಿಭಟಿಸಿದ್ದ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿಸಲಾಗಿದೆ. ಚತುಷ್ಪಥ ರಸ್ತೆ ಕಾಮಗಾರಿ ವೇಳೆ ಸರ್ವಿಸ್ ರಸ್ತೆ ಮಾಡಬೇಕಿತ್ತು. ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದು ಸ್ಥಳೀಯರ ಆರೋಪ.
