ಅನಿತಾ ಕಳೆದ ಕೆಲವು ವರ್ಷಗಳಿಂದ ರವಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅನಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅನಿತಾ ಮನೆ ಬಿಟ್ಟು ರವಿ ಮನೆ ಸೇರಿದ್ದಳು. ಮದುವೆ ಅಗುವುದಾಗಿ ನಂಬಿಸಿ ರವಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಅನಿತಾ ಶೀಲದ ಬಗ್ಗೆ ಅನುಮಾನಗೊಂಡು ವಂಚಿಸಿದ್ದ. ಈ ವಿಚಾರದಿಂದ ಬೇಸತ್ತ ಅನಿತಾ ಭಾನುವಾರ ಮೈಸೂರಿನ ಹೂಟಗಳ್ಳಿ ಮನೆಯಲ್ಲಿ ಸಿಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಮೈಸೂರು(ನ.25):ಪ್ರಿಯಕರನ ಅನುಮಾನ ರೋಗಕ್ಕೆ ಬೇಸತ್ತು ಯುವತಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ಅನಿತಾ ಎಂದು ಗುರುತಿಸಲಾಗಿದೆ.
ಅನಿತಾ ಕಳೆದ ಕೆಲವು ವರ್ಷಗಳಿಂದ ರವಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೀತಿಗೆ ಅನಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನೂ ಲೆಕ್ಕಿಸದೆ ಅನಿತಾ ಮನೆ ಬಿಟ್ಟು ರವಿ ಮನೆ ಸೇರಿದ್ದಳು. ಮದುವೆ ಅಗುವುದಾಗಿ ನಂಬಿಸಿ ರವಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಅನಿತಾ ಶೀಲದ ಬಗ್ಗೆ ಅನುಮಾನಗೊಂಡು ವಂಚಿಸಿದ್ದ.
ಈ ವಿಚಾರದಿಂದ ಬೇಸತ್ತ ಅನಿತಾ ಭಾನುವಾರ ಮೈಸೂರಿನ ಹೂಟಗಳ್ಳಿ ಮನೆಯಲ್ಲಿ ಸಿಮೆಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಕೆ.ಆರ್.ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
