ಸಿಎಂ ಸಿದ್ದರಾಮಯ್ಯ 2.16 ನಿಮಿಷದ ಶುಭ ಮಕರ ಲಗ್ನದಲ್ಲಿ ನಂದಿಧ್ವಂಜಕ್ಕೆ ಪೂಜೆ ಸಲ್ಲಿಕೆಯಿಂದ ಆರಂಭವಾಗಿ ಬನ್ನಿಮಂಟಪದವರೆಗೆ ವಿವಿಧ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. 

ಮೈಸೂರು(ಅ.12): ಜಗದ್ವಿಖ್ಯಾತ 406ನೇ ಮೈಸೂರು ದಸರಾಗೆ ಅದ್ದೂರಿ ತೆರೆ ಬಿದ್ದಿದೆ.

ಸಿಎಂ ಸಿದ್ದರಾಮಯ್ಯ 2.16 ನಿಮಿಷದ ಶುಭ ಮಕರ ಲಗ್ನದಲ್ಲಿ ನಂದಿಧ್ವಂಜಕ್ಕೆ ಪೂಜೆ ಸಲ್ಲಿಕೆಯಿಂದ ಆರಂಭವಾಗಿ ಬನ್ನಿಮಂಟಪದವರೆಗೆ ವಿವಿಧ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. 

ಮಧ್ಯಾಹ್ನ ಸುಮಾರು 4 ಗಂಟೆ 10 ನಿಮಿಷಕ್ಕೆ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಜಂಬೂ ಸವಾರಿಗೆ ಚಾಲನೆ ಕೊಟ್ಟರು. ಸುಮಾರು 750 ಕೆಜಿ ಚಿನ್ನದ ಅಂಬಾರಿಯಲ್ಲಿದ್ದ ದೇವಿ ಚಾಮುಂಡಿಗೆ ಸಿಎಂ ಪುಷ್ಪಾರ್ಚನೆ ಮೂಲಕ ಮೆರವಣಿಗೆಗೆ ಶ್ರೀಕಾರ ಹಾಕಿದರು.

ಸತತ 5ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನ ಚಿನ್ನದ ಅಂಬಾರಿಯಲಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನ ಹೊತ್ತು ಬನ್ನಿಮಂಟಪದವರೆಗೆ ಹೆಜ್ಜೆ ಹಾಕಿದ. 

ಸಂಜೆ ರಾಜ್ಯ ಪಾಲರು ಬನ್ನಿಮಂಟಪದಲ್ಲಿ ಪಂಜಿನ ಕವಾಯತಿಗೆ ಚಾಲನೆ ನೀಡಿದರು. ಬನ್ನಿ ಮಂಟಪದ ಮೈದಾನದಲ್ಲಿ ಆಶ್ವಾರೋಹಿ ಸಿಬ್ಬಂದಿಯಿಂದ ಶೌರ್ಯ ಪ್ರದರ್ಶನ ಹಾಗೂ ಪಂಜಿನ ಕವಾಯತು ನಡೀತು.